‘ನಟಿ ರಾಗಿಣಿ’ಗೆ ಮತ್ತೊಂದು ಸಂಕಷ್ಟ!

‘ನಟಿ ರಾಗಿಣಿ’ಗೆ ಮತ್ತೊಂದು ಸಂಕಷ್ಟ!

ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿ ನ್ಯಾಯಂಗ ಬಂಧನದ ಮೂಲಕ ಜೈಲು ಸೇರಿರುವಂತ ನಟಿ ರಾಗಿಣಿಗೆ, ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ರಾಗಿಣಿಗೆ ಜಾಮೀನು ನೀಡದಂತೆ ಸಿಸಿಬಿಯಿಂದ ಕೋರ್ಟ್ಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಲಾಗಿದೆ. ಹೀಗಾಗಿ ನಟಿ ರಾಗಿಣಿ ಸಲ್ಲಿಸಿರುವಂತ ಜಾಮೀನು ಅರ್ಜಿಗೆ ತಡೆ  ಉಂಟಾದಂತೆ ಆಗಿ, ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.

ಇದೇ ಪ್ರಕರಣದಲ್ಲಿ ಜೈಲು ಸೇರಿರುವಂತ ನಟಿ ರಾಗಿಣಿ ಕೂಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂತಹ ಜಾಮೀನು ಅರ್ಜಿಯನ್ನು ಕೋರ್ಟ್ ಜನವರಿ 8ರಂದು ವಿಚಾರಣೆ ನಡೆಸಲಿದೆ.

ಹೀಗಾಗಿ ಇಂತಹ ಆರೋಪಿಗೆ ಜಾಮೀನು ನೀಡದಂತೆ ಕೋರ್ಟ್ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಹೀಗಾಗಿ ಇದೀಗ ನಟಿ ರಾಗಿಣಿಗೆ ಜಾಮೀನು ನೀಡೋದಕ್ಕೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದ್ದು, ಜಾಮೀನು ಸಿಗುತ್ತಾ ಎಂಬುದಾಗಿ ಕಾದುನೋಡಬೇಕಿದೆ.

Related