ಸಾರಿಗೆ ಇಲಾಖೆಯಿಂದ ಸಿಕ್ತು ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್

ಸಾರಿಗೆ ಇಲಾಖೆಯಿಂದ ಸಿಕ್ತು ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಮಹತ್ವದ ಗ್ಯಾರಂಟಿ ಆದ ಶಕ್ತಿ ಯೋಜನೆಯು ಈಗಾಗಲೇ ಮಹಿಳೆಯರಿಗೆ ಶಕ್ತಿ ತುಂಬ ಕೆಲಸವನ್ನು ಮಾಡಿದೆ. ಈ ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಕೋಟಿಗಟ್ಟಲೆ ಮಹಿಳೆಯರು ಉಚಿತವಾಗಿ ಪ್ರತಿನಿತ್ಯ ಪ್ರಯಾಣಿಸುತ್ತಿದ್ದಾರೆ.

ಇನ್ನು ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗುತ್ತಿರುವುದರಿಂದ ಮಹಿಳೆಯರಿಗೆಂದೇ ಪ್ರತ್ಯೇಕವಾಗಿ ಬಸ್ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಚಿಂತನ ನಡೆಸಿದೆ ಎಂದು ತಿಳಿದುಬಂದಿದೆ.

ಹೌದು, ಮಹಿಳೆಯರಿಗೆಂದೇ ಪ್ರತ್ಯೇಕ ಪಿಂಕ್ ಬಸ್ ಬಿಡುಗಡೆ ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮುಂದಾಗಿದೆ. ಪ್ರಯೋಗಿಕವಾಗಿ ಬಿಎಂಟಿಸಿಯಲ್ಲಿ ಆ ಬಸ್​ಗಳನ್ನ ಪರಿಚಯಿಸಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಿಳಾ ಪ್ರಯಾಣಿಕರು ಪಿಂಕ್ ಬಸ್​​ ಸೇವೆಯನ್ನು ಬಹುಬೇಗ ಪಡೆಯುವ ಅವಕಾಶವಿದೆ.

BMTC ಪ್ರಸ್ತುತ ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚಿನ ಬಸ್​ಗಳನ್ನ ಖರಿದಿ ಮತ್ತು ಜಿಸಿಸಿ ಆಧಾರಲ್ಲಿ ಪಡೆಯುತ್ತಿದೆ. ಅದರಲ್ಲಿ ಕೆಲ ಬಸ್​ಗಳನ್ನ ಪಿಂಕ್​ ಬಸ್​ಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ ಅಂತಾ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.

 

Related