ಮುರುಘಾ ಶ್ರೀಗಳಿಂದ ಅನ್ನ ದಾಸೋಹ

  • In State
  • April 2, 2020
  • 440 Views
ಮುರುಘಾ ಶ್ರೀಗಳಿಂದ ಅನ್ನ ದಾಸೋಹ

ಚಿತ್ರದುರ್ಗ, ಏ.02 : ಚಿತ್ರದುರ್ಗ ತಾಲ್ಲೂಕಿನ ಅಳಿಯೂರು ಗ್ರಾಮಗಳ ಬಳಿ ವಾಸವಿದ್ದ ಸುಡುಗಾಡು ಸಿದ್ದರು ಹನಿ ನೀರೂ ಸಿಗದೆ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಸಿಕ್ಕ ಸಿಕ್ಕವರನ್ನ ಅಂಗಲಾಚುತ್ತಿದ್ದರು. ಬಡ ಕುಟುಂಬಗಳ ಕರುಣಾ ಜನಕ ಪರಿಸ್ಥಿತಿ. ಮಾತೃ ಹೃದಯದ ಮುರುಘಾ ಶ್ರೀಗಳು ನೂರಕ್ಕೂ ಹೆಚ್ಚು ಬಡ ಕುಟುಂಬಗಳ ಜನರ ಹಸಿವು ನೀಗಿಸಲು ಅನ್ನ ದಾಸೋಹ ಮಾಡಿದ್ದಾರೆ. ಕೊರೋನಾ ಗೆ ಪ್ರಪಂಚವೇ ತಲ್ಲಣಗೊಂಡಿದೆ. ಇಡೀ ಭಾರತ ಸ್ಥಬ್ಧ. ದೇಶದಲ್ಲಿ ಲಾಕ್ ಡೌನ್ ಜಾರಿ ಅಲೆಮಾರಿ, ನಿರಾಶ್ರಿತರು, ನಿರ್ಗತಿಕರು, ಅಕ್ಕಿಪಿಕ್ಕಿ ಸಮುದಾಯಗಳಂತ ಬಡ ಜನರ ಬದುಕು ಮೂರಾಬಟ್ಟೆಯಾಗಿದೆ. ಪ್ರಪಂಚದಲ್ಲಿ ಊಹೆಗೂ ನಿಲುಕದ ಕಣ್ಣಿಗೂ ಕಾಣದ ಕೊರೋನಾ ಮಾನವನ ಜೀವದ ಮೇಲೆ ಭಯ ಹುಟ್ಟಿಸಿದೆ.
ಧೈರ್ಯ ಕಳೆದುಕೊಳ್ಳಬೇಡಿ : ಸಚಿವ ಬಿ. ಶ್ರೀರಾಮುಲುಒಟ್ಟಾರೆ ಕೊರೋನಾದಿಂದ ದೇಶದ ಆರ್ಥಿಕ ಪರಿಸ್ಥಿತಿಯ ಜೊತೆಗೆ ಜನರ ಜೀವನವೂ ಅಲ್ಲೋಲ ಕಲ್ಲೋಲವಾಗಿದೆ. ಬದುಕಿನ ಬವಣೆ ನೀಗಿಸಲಾಗದೆ ಸೋತು ಬಿದ್ದ ಕೈಗಳಿಗೆ ಶಕ್ತಿ ತುಂಬಲು ಅನ್ನ ದಾಸೋಹದ ಮೂಲಕ ಮುರುಘಾ ಶ್ರೀಗಳು ಹಸಿದವರ ಹಸಿವು ನೀಗಿಸಿ ಆಸರೆಯಾಗಿದ್ದಾರೆ. ಇವರ ಜೀವ ಪರತೆಯ ಕಾಳಜಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಯಾನಿಟೈಸರ್ ನೀಡುತ್ತಿರುವ ಮುರುಘಾ ಶ್ರಿಗಳು : ಮಹಾಮಾರಿ ಕೊರೋನಾ ಹಿನ್ನಲೆ ಚಿತ್ರದುರ್ಗದ ಮುರಘಾ ಶ್ರೀಗಳು ದಾಸೋಹದ ಜೊತೆಗೆ ಸುಡಗಾಡು ಸಿದ್ದರಿಗೆ ಸ್ಯಾನಿ ಟೈಸರ್ ನೀಡುತ್ತಿದ್ದಾರೆ. ಮಾತೃ ಹೃದಯದ ಮುರುಘಾ ಶ್ರೀಗಳು ನೂರಕ್ಕೂ ಹೆಚ್ಚು ಬಡ ಕುಟುಂಬಗಳ ಜನರ ಹಸಿವು ನೀಗಿಸಲು ಅನ್ನ ದಾಸೋಹ ಮಾಡಿದ್ದಾರೆ.

Related