ದುಬಾರಿ ಡ್ರಗ್ ದಂಧೆ!

ದುಬಾರಿ ಡ್ರಗ್ ದಂಧೆ!

ಬೆಂಗಳೂರು, ಫೆ. 2 : ದಿನ ಭಾರತದ ಕರೆನ್ಸಿಯನ್ನು ನಕಲಿ ಮಾಡುವುದನ್ನು ಕೇಳಿದ್ದೆವು. ಈಗ ಭಾರತದ ವೀಸಾವನ್ನೂ ನಕಲಿ ಮಾಡಿರುವ ಪ್ರಕರಣವೊಂದನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಫ್ರಿಕಾದ ನಟೋರಿಯಸ್ ಡ್ರಗ್ ಪೆಡ್ಲರ್ಗಳು ಆಫ್ರಿಕಾದಲ್ಲೇ ಆ ದೇಶದ ಕಾನ್ಸುಲೇಟ್ ಅಧಿಕಾರಿಗಳ ಮೂಲಕ ಭಾರತದ ನಕಲಿ ವೀಸಾ ಮಾಡಿಸಿಕೊಂಡು ಭಾರತಕ್ಕೆ ನುಸುಳುತ್ತಿರುವ ಅಪರೂಪದ ಪ್ರಕರಣವನ್ನು ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅತ್ಯಂತ ದುಬಾರಿ ಬೆಲೆಯ ಎಕ್ಸ್ಟಾಸಿ ಡ್ರಗ್ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ತಾಂಜೇನಿಯಾ ದೇಶದ ನಿವಾಸಿ ಎಜಿಕೆ ಸೆಲೆಸ್ಟೈನ್ ಅನಿಗ್ಬೋ ಎಂಬಾತನನ್ನು ಬಂಧಿಸಿದ ಎಸಿಪಿ ವೆಂಕಟೇಶ್ ಪ್ರಸನ್ನ ಅವರಿಗೆ ಶಾಕ್ ಕಾದಿತ್ತು. ಈತನ ವೀಸಾವನ್ನು ಪರಿಶೀಲಿಸಿದಾಗ ನಕಲಿ ಎನ್ನುವುದು ಗೊತ್ತಾಗಿದೆ. ಇಷ್ಟು ವರ್ಷಗಳ ಕಾಲ ವಿದ್ಯಾಭ್ಯಾಸ, ಬಿಸಿನೆಸ್ ಮತ್ತು ಪ್ರವಾಸಿ ನೆಪದಲ್ಲಿಅಸಲಿ ವೀಸಾ ಪಡೆದು ಭಾರತಕ್ಕೆ ಬರುತ್ತಿದ್ದ ಆಫ್ರಿಕಾ ದೇಶದ ಡ್ರಗ್ ಡೀಲರ್ಗಳು ವೀಸಾ ಅವಧಿ ಮುಗಿದ ಬಳಿಕವೂ ನಿಯಮಬಾಹಿರವಾಗಿ ಅಕ್ರಮವಾಗಿ ನೆಲೆಸಿ ದಂಧೆ ಮುಂದುವರಿಸುತ್ತಿದ್ದರು. ಆದರೆ ವೀಸಾವನ್ನೇ ನಕಲಿ ಮಾಡಿ ಭಾರತಕ್ಕೆ ಬಂದಿರುವ ಮೊಟ್ಟ ಮೊದಲ ಪ್ರಕರಣ ಇದಾಗಿದೆ. ಹೀಗಾಗಿ ನಕಲಿ ವೀಸಾ ಅಡಿ ಬಂದು ಬಂಧಿತನಾಗಿರುವ ತಾಂಜೇನಿಯಾ ಪ್ರಜೆ ಎಜಿಕೆ ಬಗ್ಗೆ ದಿಲ್ಲಿಯಲ್ಲಿರುವ ಆಫ್ರಿಕಾದ ಎಂಬೆಸ್ಸಿ ಅಧಿಕಾರಿಗಳಿಗೆ ಮಾಹಿತಿ ರವಾನೆ ಆಗಿದೆ. ಸ್ಥಳೀಯ ಪೊಲೀಸರು ನಕಲಿ ವೀಸಾ ಸಿದ್ಧಪಡಿಸಿದ್ದಾದರೂ ಹೇಗೆ ಎನ್ನುವ ಬಗ್ಗೆ ಆರೋಪಿಯನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.

Related