Sandalwood Acress: ತನ್ನ ಅವಳಿ ಗಂಡು ಮಕ್ಕಳೊಂದಿಗೆ ಅಣ್ಣಮ್ಮನ ದರ್ಶನ ಪಡೆದ ನಟಿ ಅಮೂಲ್ಯಾ

Sandalwood Acress: ತನ್ನ ಅವಳಿ ಗಂಡು ಮಕ್ಕಳೊಂದಿಗೆ ಅಣ್ಣಮ್ಮನ ದರ್ಶನ ಪಡೆದ ನಟಿ ಅಮೂಲ್ಯಾ

ಸ್ಯಾಂಡಲ್​ವುಡ್​ನ ಗೋಲ್ಡನ್​ ಕ್ವೀನ್​ ಅಮೂಲ್ಯಾ ಮುದ್ದಾದ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಹೆರಿಗೆಯ ನಂತರ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ಅಮೂಲ್ಯಾ ಇದೀಗ ಮಕ್ಕಳು ಹಾಗೂ ಕುಟುಂಬದವರ ಜೊತೆ ಅಣ್ಣಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದು, ಫೋಟೋಗಳು ವೈರಲ್​ ಆಗುತ್ತಿದೆ.

ಚಲುವಿನ ಚಿತ್ತಾರದ ಮೂಲಕ ಕನ್ನಡಗಿರ ಮನೆ ಮನದಲ್ಲಿ ಐಶು ಆಗಿ ಪ್ರಸಿದ್ದರಾಗಿರುವ ನಟಿ ಅಮೂಲ್ಯಾ. ತಮ್ಮ ಮುಗ್ಧ ಹಾಗೂ ಸಹಜ ನಟನೆಯ ಕಾರಣದಿಂದ ಗೋಲ್ಡನ್​ ಕ್ವೀನ್​ ಎಂದೇ ಹೆಸರು ಪಡೆದವರು.

ಚಿಕ್ಕ ವಯಸ್ಸಿನಲ್ಲಿಯೇ ಟಿವಿ ಕಿರುತೆರೆಗಳಲ್ಲಿ ನಟಿಸಿ ಬಾಲ ನಟಿಯಾಗಿ ಗುರುತಿಸಿಕೊಂಡವರು ಈ ನಟಿ. ನಂತರ ಚೆಲುವಿನ ಚಿತ್ತಾರ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿ ಮಿಂಚಿದವರು.2017ರಲ್ಲಿ ಜಗದೀಶ್​ ಅವರನ್ನು ಮದುವೆಯಾದ ಅಮೂಲ್ಯಾ, ಚಿತ್ರರಂಗದಿಂದ ದೂರವಿದ್ದರು. ಕಳೆದ ಮಾರ್ಚ್​ನಲ್ಲಿ ಅವಳಿ ಗಂಡು ಮಕ್ಕಳ ತಾಯಿ ಕೂಡ ಆಗಿದ್ದಾರೆ.

Related