ತಾಯಿಯ ಪ್ರಪಂಚ : ಮಗಳನ್ನು ಬೆಳಸಲು 30 ವರ್ಷ ಗಂಡಿನ ವೇಷ ತೊಟ್ಟ ತಾಯಿ..! ಮುತ್ತು ಆಗಿ ಬದಲಾದ ಪೆಚ್ಚಿಯಮ್ಮಳ್​ ಜೀವನ

ತಮಿಳುನಾಡು: ತೂತುಕುಡಿ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮಗಳನ್ನು ಒಂಟಿಯಾಗಿ ಬೆಳೆಸಲು 30 ವರ್ಷಗಳಿಂದ ಗಂಡಿನ ವೇಷ ತೊಟ್ಟಿದ್ದಾರೆ. ಕಳೆದ ಮೂವತ್ತು ವರ್ಷದಿಂದ ಗಂಡಿನ ವೇಷದಲ್ಲಿ ಜೀವನ ಸಾಗಿಸುತ್ತಿದ್ದಾರೆ. ತನ್ನ ಮಗಳ ಬೆಳೆಸಲು ಈ ವೇಷ ನನಗೆ ಅನಿವಾರ್ಯ, ಅವಶ್ಯ ಆಯಿತು. ಹಾಗಾಗಿ ಈ ನಿರ್ಧಾರ ಮಾಡಿರುವುದಾಗಿ ಆಕೆ ತಿಳಿಸಿದ್ದಾರೆ.

ಮೂರು ದಶಕಗಳ ಹಿಂದೆ, ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೆಚ್ಚಿಯಮ್ಮಳ್​ ಅವರು ಮದುವೆಯಾದ 15 ದಿನಕ್ಕೆ ಹೃದಯಾಘಾತದಿಂದ ಪತಿಯನ್ನು ಕಳೆದುಕೊಂಡರು. ತಮ್ಮ 15 ದಿನದ ಸಂಸಾರದ ಪ್ರತಿಫಲವಾಗಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದಾದ ಬಳಿಕ ಜೀವನದಲ್ಲಿ ತನಗಿರುವ ಒಬ್ಬಳೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳಲು ಪೆಚ್ಚಿಯಮ್ಮಳ್​​ ನಿರ್ಧರಿಸಿದರು. ಮರು ಮದುವೆ ಆಗದೇ, ಪುಟ್ಟ ಮಗುವನ್ನು ಕಂಕುಳಲ್ಲಿ ಹೊತ್ತು ಜೀವನ ಸಾಗಿಸಲು ಮುಂದಾದರು. ಆದರೆ, ಈ ವೇಳೆ ಕೆಲಸಕ್ಕೆ ಹೋದ ಪೆಚ್ಚಿಯಮ್ಮಳ್​ ಕಿರುಕುಳವನ್ನು ಎದುರಿಸಿದರು.

ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಕೆಲಸದಿಂದ 100 ದಿನದ ಕೆಲಸದವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಇವರು ಮಾಡಿದರು. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ನೀಡಲು ನಾನು ಪ್ರತಿ ಪೈಸೆಯನ್ನೂ ಉಳಿಸಿದೆ. ದಿನ ಕಳೆಯುತ್ತಿದ್ದಂತೆ ನಾನು ಮುತ್ತು ಆಗಿ ಎಲ್ಲರು ಗುರುತಿಸಲಾರಂಭಿಸಿದರು. ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಮುತ್ತು ಆಗಿಯೇ ನಮೂದಿಸಲ್ಪಟ್ಟಿದೆ.

Related