ಅಮಿತ್ ಶಾ ದೆಹಲಿಗೆ ಕರೆಸಿ ನನಗೆ ಅವಮಾನ ಮಾಡಿದ್ದಾರೆ: ಈಶ್ವರಪ್ಪ

ಅಮಿತ್ ಶಾ ದೆಹಲಿಗೆ ಕರೆಸಿ ನನಗೆ ಅವಮಾನ ಮಾಡಿದ್ದಾರೆ: ಈಶ್ವರಪ್ಪ

ಬೆಂಗಳೂರು: ಬಿಜೆಪಿ ಪಕ್ಷದ ಹಿರಿಯರ ಮಾತನ್ನು ಮೀರಬಾರದೆಂದು ನಾನು ಅಮಿತ್ ಶಾ ಕರೆ ಮೇರೆಗೆ ದೆಹಲಿಗೆ ತೆರಳಿದೆ ಆದರೆ, ದೆಹಲಿಗೆ ನನ್ನ ಕರೆಸಿಕೊಂಡು ಅಮಿತ್ ಶಾ ಅವರ ಬೇಟಿಗೆ ಅವಕಾಶ ನೀಡದೆ ನನ್ನನ್ನು ಅವಮಾನಿಸಿದ್ದಾರೆ ಎಂದು ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಅವರು ಅಮಿತ್ ಶಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರ ಕರೆ ಮೇರೆಗೆ ನಾನು ದೆಹಲಿಗೆ ಹೋದೆ ಆದರೆ ಅಮಿತ್ ಶಾ ಅವರು ಉದ್ದೇಶಪೂರ್ವಕವಾಗಿ ಭೇಟಿಗೆ ಅವಕಾಶ ನೀಡಿಲ್ಲವೆಂದು ಅಮಿತ್ ಶಾ ಅವರ ವಿರುದ್ಧ ಗುಡುಗಿದ್ದಾರೆ.

ಅಮಿತ್ ಶಾ ಅವರ ಆಫೀಸಿಗೆ ನಾನು ಹಲವಾರು ಬಾರಿ ಕರೆ ಮಾಡಿದೆ ಆದರೆ ಅಮಿತ್ ಶಾ ಅವರೇ ಈ ಬಾರಿ ನನ್ನನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದರು.

ಅಮಿತ್ ಅವರು ನಾನು ಭೇಟಿ ಮಾಡದೇ ಇದ್ದದ್ದು ಒಳ್ಳೇದೇ ಆಯಿತು. ನನ್ನ ಮುಂದಿನ ನಿರ್ಧಾರವನ್ನು ನಾನು ಈಗ ಕೈಗೊಳ್ಳುತ್ತೇನೆ ಎಂದು ಹೇಳಿದರು. ನನ್ನ ಹಲವಾರು ಪ್ರಶ್ನೆಗಳಿಗೆ ಅಮಿತ್ ಅವರ ಹತ್ತಿರ ಉತ್ತರವಿಲ್ಲ ಆದಕಾರಣ ನನ್ನನ್ನು ಭೇಟಿ ಮಾಡಲು ಅಮಿತ್ ಶಾ ಅವರು ನಿರಾಕರಿಸಿದ್ದಾರೆ ಎಂದು ಹೇಳಿದರು.

ಈ ದೆಹಲಿಯ ಯಾತ್ರೆ ನನಗೆ ಭಗವಂತ ಕೊಟ್ಟ ವರ ಎಂದು ಭಾವಿಸುತ್ತಾ ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ಏಪ್ರಿಲ್ 12ನೇ ತಾರೀಕು ಶಿವಮೊಗ್ಗದಲ್ಲಿ ದೊಡ್ಡ ಮೆರವಣಿಗೆ ಮೂಲಕ ನಾನು ನಾಮ ಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಬಹುಸಂಖ್ಯೆಯಲ್ಲಿ ಗೆಲ್ಲಲಿ ನಾನು ಶಿವಮೊಗ್ಗದಲ್ಲಿ ಗೆದ್ದು ಹಿಂದುತ್ವದ ರಕ್ಷಣೆಗಾಗಿ ಮೋದಿ ಕೈ ಬಲಪಡಿಸುತ್ತೇನೆ ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣ ಕೊನೆಯಾಗಬೇಕು ದೇಶದಲ್ಲಿ ‌ನರೇಂದ್ರ ಮೊದಿಯವರ ಕೈ ಬಲಗೊಳ್ಳಬೇಕು  ಏರ್ಪೋರ್ಟ್ ನಲ್ಲಿ ಕೆ.ಎಸ್‌  ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

 

Related