ಬೆಳ್ಳಿ ಗೆದ್ದ ಭಾರತದ ಅಮಿತ್ ಖತ್ರಿ

  • In Sports
  • August 21, 2021
  • 389 Views
ಬೆಳ್ಳಿ ಗೆದ್ದ ಭಾರತದ ಅಮಿತ್ ಖತ್ರಿ

ನೈರೋಬಿ: 4* 400 ಮೀ ಮಿಶ್ರ ರಿಲೇ ತಂಡವು ಕಂಚು ಗೆದ್ದ ನಂತರ ಶನಿವಾರ ನಡೆದ ವಿಶ್ವ ಯು-20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅಮಿತ್ ಖತ್ರಿ 10 ಕಿ.ಮೀ ರೇಸ್ ವಾಕ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಖತ್ರಿ 42:17.94 ನಿಮಿಷಗಳಲ್ಲಿ ತಮ್ಮ ಗುರಿ ಮುಟ್ಟಿದ್ರೆ, ಆತಿಥೇಯ ದೇಶದ ಕೀನ್ಯಾದ ಹೆರಿಸ್ಟೋನ್ ವಾನ್ಯೋನಿ 42:10.84 ನಿಮಿಷಗಳಲ್ಲಿ ಅವರ ಗುರಿ ಮುಟ್ಟುವುದರ ಮೂಲಕ ಚಿನ್ನ ಗೆದ್ದರು
ಇನ್ನು ಸ್ಪೇನ್ʼನ ಪಾಲ್ ಮೆಕ್ ಗ್ರಾಥ್ 42:26.11 ನಿಮಿಷಗಳ ಸಮಯದೊಂದಿಗೆ ಕಂಚಿನ ಪದಕ ಗೆದ್ದರು.

Related