ಅಂಬೇಡ್ಕರ್ ಮೆರವಣಿಗೆ ರದ್ದು, ದಲಿತ ಮುಖಂಡರ ಆಕ್ರೋಶ

ಅಂಬೇಡ್ಕರ್ ಮೆರವಣಿಗೆ ರದ್ದು, ದಲಿತ ಮುಖಂಡರ ಆಕ್ರೋಶ

ಶಹಾಪುರ : ದೇಶ ಮತ್ತು ರಾಜ್ಯಗಳಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ನಡೆಸುವ ಚುನಾವಣಾ ಪ್ರಚಾರಕ್ಕೆ ಕೊರೋನಾ ಅಡ್ಡಿ ಇಲ್ಲ. ಆದರೆ ಅಂಬೇಡ್ಕರ್ ಜಯಂತ್ಯುತ್ಸವಕ್ಕೆ ಮಾತ್ರ ಕೋವಿಡ್-19 ಅಡ್ಡಿಯಾಗುತ್ತೆ. ಇಂತ ಮನಸ್ಥಿತಿ ಇರುವ ಸರ್ಕಾರ ಮತ್ತು ಆಡಳಿತಾಧಿಕಾಗಳಿಗೆ ಮುಂದೆ ಜನರು ಉತ್ತರಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಸಂ. ಕಾರ್ಯದರ್ಶಿಯಾದ ಹನುಮೇಗೌಡ ಬೀರನಕಲ್ ಗುಡುಗಿದರು.

ನಗರದ ಸಿಪಿಎಸ್ ಶಾಲಾ ಆವರಣದಲ್ಲಿ ಅಂಬೇಡ್ಕರವರ 130ನೇ ಜಯಂತ್ತ್ಯುತ್ಸವ ದಿನವನ್ನು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ದಿನವೆಂಬ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ದಲಿತ ಮುಖಂಡರಾದ ನೀಲಕಂಠ ಬಡಿಗೇರ ಮಾತನಾಡಿ, ಇತಿಹಾಸದಲ್ಲಿ ಮೊದಲು ಶಹಾಪುರದಲ್ಲಿ ಅಂಬೇಡ್ಕರ್ ಮೆರವಣಿಗೆ ರದ್ದು ಮಾಡಿದ್ದು. ಬಾಬಾ ಸಾಹೇಬರ ಅಭಿಮಾನಿಗಳಿಗೆ ನೋವುಂಟು ಮಾಡಿದಂತಾಗಿದೆ.

ಕೊರೋನಾ ಹೆಸರಲ್ಲಿ ಮೆರವಣಿಗೆ ರದ್ದು ಮಾಡಿದ್ದು ಉದ್ದೇಶ ಪೂರ್ವಕ ಕೊವಿಡ್ ಬರುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾರ್ವಜನಿಕರಿಗಲ್ಲ ಹಾಗಿದ್ರೆ ಚುನಾವಣಾ ಪ್ರಚಾರ, ಅದ್ದೂರಿ ಜಾತ್ರೆಗಳು ನಡೆಯುತ್ತಿರಲಿಲ್ಲ. ಜನರು ದೇಶದಲ್ಲಿ ನಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಭೀಮರಾಯನ ಗುಡಿಯ ಉಪನ್ಯಾಸಕ ಡಾ. ರವಿಂದ್ರನಾಥ ಹೊಸಮನಿ ಮಾತನಾಡಿ, ಪ್ರಪಂಚದಾದ್ಯಂತ ಹಲವು ಕಡೆಯಲ್ಲಿ ಅಂಬೇಡ್ಕರ್ ಹುಟ್ಟಿದ ದಿನವನ್ನು ಸಮಾನತೆಯ ದಿನ, ಸ್ವಾತಂತ್ರ್ಯ ದಿನ ಹೀಗೆ ಹಲವಾರು ರೀತಿಯಲ್ಲಿ ಆಚರಿಸಿ ಅವರ ಜ್ಞಾನವನ್ನು ಪರಿಚಯಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಅವರನ್ನು ಜಾತಿಗೆ ಸೀಮಿತ ಮಾಡಿದ್ದು ದುರದುಷ್ಟ ಎಂದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಕರುಣಾನಂದ ಭಂತೇಜಿ ಸಾರಿಪುತ್ರ ಬುದ್ದವಿಹಾರ ಶಹಾಪುರ ಇವರು ವಹಿಸಿದ್ದರು. ಸಂಜಿವರೆಡ್ಡಿ ದರ್ಶನಾಪುರ, ಹಣಮೇಗೌಡ ಬೀರನಕಲ್ ಜ್ಯೋತಿ ಬೇಳಗಿಸಿದರು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಮರೇಶ ವಿಭೂತಿಹಳ್ಳಿ, ಭೀಮರಾಯ ಹೊಸಮನಿ, ಬಾಬುರಾವ್ ಬೂತಾಳಿ, ಶಿವಕುಮಾರ ತಳವಾರ, ರಾಮಣ್ಣ ಸಾದ್ಯಾಪುರ, ಶ್ರೀಶೈಲ ಹೊಸಮನಿ, ಶಂಕರ ಸಿಂಗೆ, ಭಾಗಪ್ಪ ಮುಂಡಾಸ್, ನಾಗಣ್ಣ ಬಡಿಗೇರ, ರಾಯಪ್ಪ ಗಂಗನಾಳ, ಮಾನಯ್ಯ ಹೊಸಮನಿ, ಗುರುನಾಥ ಬಾಣತಿಹಾಳ, ಭೀಮರಾಯ ಜುನ್ನ, ಈರಣ್ಣ ಖಸನ್, ರಾಯಣ್ಣ ಸಾಲಿಮನಿ, ಶರಣೂ ದೋರನಹಳ್ಳಿ, ಯಂಕಪ್ಪ ಪೂಜಾರಿ, ಹೊನ್ನಪ್ಪ ರಸ್ತಾಪುರ, ಶರಣಪ್ಪ ಕೊಂಬಿನ್, ಚಿದಾನಂದ ಬಡಿಗೇರ, ಪೀರಪ್ಪ ಹತ್ತಿಗುಡುರ, ನಾಗರಾಜ ಬೊಮ್ಮನಹಳ್ಳಿ, ಭಿಮರಾಯ ಸೈದಾಪುರ, ಹೈಯಾಳಪ್ಪ ಮದರಕಲ್, ಸುರೇಶ್ ಪಾತ್ರೋಟ ಸೇರಿದಂತೆ ಚಿಂತಕರು, ದಲಿತ ಮುಖಂಡರು, ನೂರಾರು ಅಂಬೇಡ್ಕರ ಅಭಿಮಾನಿ ಇನ್ನಿತರರಿದ್ದರು.

Related