ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಎಲ್ಲಾ ರೈಲುಗಳು ಸ್ಥಗಿತ

ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಎಲ್ಲಾ ರೈಲುಗಳು ಸ್ಥಗಿತ

ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು ಕರ್ನಾಟಕದಿಂದ ತಮಿಳುನಾಡಿಗೆ ತೆರಳಬೇಕಿದ್ದ ಎಲ್ಲಾ ರೈಲುಗಳು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಹೌದು, ಬಂಗಾಳ ಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತದ ಅಬ್ಬರದಿಂದ ತಮಿಳುನಾಡಿನ ರಸ್ತೆಗಳು, ರೈಲು ನಿಲ್ದಾಣಗಳು ಸಂಪೂರ್ಣ ಜಲಾವೃತಗೊಂಡಿವೆ ಆದಕಾರಣ ಕರ್ನಾಟಕದಿಂದ ತಮಿಳುನಾಡಿಗೆ ತೆರಳಬೇಕಿದ್ದ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಯಾವ ಯಾವ ರೈಲು ಸೇವೆ ರದ್ದಾಗಿದೆ :

  1. ರೈಲಿನ ಸಂಖ್ಯೆ: 20607 -ಡಾ. ಎಂಜಿಆರ್ ಚೈನೈ ಸೆಂಟ್ರಲ್ – ಮೈಸೂರು
  2. ರೈಲಿನ‌ ಸಂಖ್ಯೆ: 20608 – ಮೈಸೂರು – Dr. MGR ರೈಲ್ವೇ ನಿಲ್ದಾಣ (ಸೆಂಟ್ರಲ್)
  3. ರೈಲಿನ‌ ಸಂಖ್ಯೆ :12007 -Dr. MGR ಚೆನೈ ಸೆಂಟ್ರಲ್- ಮೈಸೂರು
  4. ರೈಲಿನ ಸಂಖ್ಯೆ : 12008 – ಮೈಸೂರು- Dr. MGR ಚೆನೈ ಸೆಂಟ್ರಲ್
  5. ರೈಲಿನ ಸಂಖ್ಯೆ: 22625 – . MGR ಚೆನೈ ಸೆಂಟ್ರಲ್ – KSR ಬೆಂಗಳೂರು
  6. ರೈಲಿನ ಸಂಖ್ಯೆ : 22626 -KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
  7. ರೈಲಿನ ಸಂಖ್ಯೆ :12639 – Dr. MGR ಚೆನೈ ಸೆಂಟ್ರಲ್- KSR ಬೆಂಗಳೂರು
  8. ರೈಲಿನ ಸಂಖ್ಯೆ :12640 – KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
  9. ರೈಲಿನ ಸಂಖ್ಯೆ :12608 – ಬೆಂಗಳೂರು – Dr. MGR ಚೆನೈಸೆಂಟ್ರಲ್

ಚಂಡಮಾರುತದಿಂದಾಗಿ ಚೆನ್ನೈ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ 5 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಶೇಖರಣೆಗೊಂಡು ಪ್ರವಾಹದಂತಾಗಿದ್ದು, ರಸ್ತೆಗಳು ನದಿಯಂತಾಗಿವೆ.

 

Related