ಸೋರೆಕಾಯಿ ಸೇವನೆಯಿಂದ ಇಷ್ಟೆಲ್ಲ ಲಾಭ

ಸೋರೆಕಾಯಿ ಸೇವನೆಯಿಂದ ಇಷ್ಟೆಲ್ಲ ಲಾಭ

ಸಾಮಾನ್ಯವಾಗಿ ನಾವೆಲ್ಲರೂ ತರಕಾರಿಯನ್ನು ಬಳಸುತ್ತೇವೆ. ಒಂದೊಂದು ತರಕಾರಿಯಲ್ಲಿ ಅದರದೇ ಆದ ಮಹತ್ವದ ಗುಣಗಳನ್ನು ಹೊಂದಿರುತ್ತವೆ.

ಸೋರೆಕಾಯಿ ನಮ್ಮೆಲ್ಲರಿಗೂ ಗೊತ್ತಿರುವ ತರಕಾರಿ. ಈ ಸೋರೆಕಾಯಿಯನ್ನು ಸಾಮಾನ್ಯವಾಗಿ ನಾವೆಲ್ಲರೂ ಪಲ್ಯ ಸಾಂಬಾರು ಇನ್ನಿತರ ಪದಾರ್ಥಗಳನ್ನು ಮಾಡುತ್ತೇವೆ. ಈ ಸೋರೆಕಾಯಿಯನ್ನು ನಾವು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ವಿವಿಧ ರೀತಿಯ ಲಾಭಗಳನ್ನು ಪಡೆಯಬಹುದು.

ಮಧುಮೇಹಿ, ಮೂಲವ್ಯಾಧಿ, ಕಾಮಾಲೆ, ರಕ್ತದ ಒತ್ತಡ ಇರುವವರು ಇದನ್ನು ಉಪಯೋಗಿಸಿದ್ದರೆ, ಶರೀರಕ್ಕೆ ತಂಪನ್ನುಂಟು ಮಾಡುತ್ತದೆ. ಈ ತರಕಾರಿ ಗರ್ಭಿಣಿ ಸ್ತ್ರೀಯರಿಗೆ, ಹೃದಯ ದೌರ್ಭಲ್ಯ, ಮಕ್ಕಳಿಗೆ ಎಲ್ಲರಿಗೂ ಒಳ್ಳೆಯ ತ್ರಾಣಿಕ.

ಸೋರೆಕಾಯಿಯಲ್ಲಿ ತೇವಾಂಶ, ಖನಿಜಾಂಶ, ಕಾರ್ಬೋಹೈಡ್ರೈಟ್ಸ್, ನಾರಿನಾಂಶ, ಮೇದಸ್ಸು, ಕ್ಯಾಲ್ಸಿಯಮ್, ಮೆಘ್ನೇಶಿಯಮ್, ಸೋಡಿಯಂ, ಪಾಸ್ಪರಸ್, ಕಬ್ಬಿಣ, ಕಾಪರ್, ಗಂಧಕ, ‘ಸಿ’ ಜೀವಸತ್ವ ಇವೆಲ್ಲವೂ ಇದೆ. ಸೋರೆಕಾಯಿಯನ್ನು ಉಪಯೋಗಿಸುವುದರಿಂದ ಹಲವಾರು ರೋಗಗಳನ್ನು ನಿವಾರಣೆ ಮಾಡಲು ಸಹಾಯವಾಗುತ್ತದೆ.

೧. ಸೋರೆಕಾಯಿಯ ಪಲ್ಯ ತಿನ್ನುವುದರಿಂದ ಗರ್ಭಿಣಿಯರ ನಿಶ್ಯಕ್ತಿ ದೂರವಾಗಿ, ಒಳಗೆ ಬೆಳೆಯುವ ಮಗುವಿಗೆ ಪುಷ್ಠಿ ದೊರೆಯುತ್ತದೆ.

೨. ಪುರುಷರು ಸೋರೆಕಾಯಿಯನ್ನು ಸೇವನೆ ಮಾಡುವುದ ರಿಂದ ಪುರುಷತ್ರ (ಪುಂಸತ್ವ) ಜಾಸ್ತಿಯಾಗುತ್ತದೆ.

೩. ಸೋರೆಕಾಯಿ ರಸವನ್ನು ಹಚ್ಚುವುದರಿಂದ ಅಂಗೈ ಅಂಗಾಲು ಉರಿ ಗುಣಮುಖವಾಗುತ್ತದೆ.

೪. ಸೋರೆಕಾಯಿಯನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

೫. ಸೋರೆಕಾಯಿಯ ತಿರುಳನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ.

೬. ಸೋರೆಕಾಯಿಯ ರಸದಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ, ತಲೆಕೂದಲು ಸೊಂಪಾಗಿ ಬೆಳೆಯುತ್ತದೆ.

 

Related