ಎಲ್ಲರ ಚಿತ್ತ ದೆಹಲಿಯತ್ತ

ಎಲ್ಲರ ಚಿತ್ತ ದೆಹಲಿಯತ್ತ

ಬೆಂಗಳೂರು: ರಾಜ್ಯದಲ್ಲಿ 2023ನೇ ಸಾಲಿನ ವಿಧಾನಸಭೆಯ ಚುನಾವಣೆಯ ಫಲಿತಾಂಶ ಬಂದಿದ್ದು ಕಾಂಗ್ರೆಸ್ 135 ಸ್ಥಾನಗಳಿಂದ ಗೆದ್ದು ಬೀಗಿದ್ದು ,ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಯ್ಕೆ ಕಂಟಕವಾಗಿ ಮುಂದುವರೆದಿರುವುದರಿಂದ ಇಂದು ಡಿಕೆ ಶಿವಕುಮಾರ್ ಅವರು ದೆಹಲಿಯತ ಹೊರಟಿದ್ದಾರೆ.

ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಡಿಕೆ ಶಿವಕುಮಾರ್ ಬಿಗಿ ಪಟ್ಟು ಮುಂದುವರಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯಗೆ ಒಂದು ಅವಕಾಶ ಕೊಟ್ಟಿದ್ದಿರಾ. ನನಗೆ ಈ ಬಾರಿ ಅವಕಾಶ ನೀಡಿ ಎಂದಿದ್ದಾರೆ. ನಿನ್ನೆ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಡಿಕೆಶಿ ಪರವಾಗಿ ಡಿಕೆ ಸುರೇಶ್ ಮಾತುಕತೆ ನಡೆಸಿದ್ದು ಪಕ್ಷ ಕಟ್ಟಿ ಸಂಘಟನೆ ಮಾಡಿದ್ದು ನಾವು. ಚುನಾವಣೆ ಎದುರಿಸಿದ್ದು ನಾವು. ಕಷ್ಟ ಸಹಿಸಿದ್ದು ನಾವು. ಹೀಗಿದ್ದಾಗ ನಮಗೆ ಅವಕಾಶ ಕೊಡಿ ಎಂದು ಡಿಕೆ ಶಿವಕುಮಾರ್ ಬಣ ಒತ್ತಾಯಿಸಿದೆ.

ಇನ್ನು ನಮ್ಮ ನಾಯಕರ ಜೊತೆ ದೆಹಲಿಗೆ ತೆರಳುತ್ತಿದ್ದೇನೆ. ರಾಜ್ಯದಲ್ಲಿ ಶ್ರಮಪಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಶ್ರಮಪಟ್ಟಿದ್ದಕ್ಕೆ ಕೂಲಿಯನ್ನು ಕೇಳ್ತಿದ್ದೇವೆ. ನಾನು, ಡಿಕೆಶಿ ಒಂದೇ ಜಿಲ್ಲೆಯವರು, ಹಾಗಾಗಿ ಅವರ ಪರ ಒಲವು. ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೋ ನೋಡೋಣ. ನಮ್ಮ‌ ಕ್ಷೇತ್ರದ ಜನರಿಗೂ ಸಚಿವರಾಗಲಿ ಅನ್ನೋ ಆಸೆ ಇದೆ. ನನಗೂ ಸಚಿವ ಸ್ಥಾನಬೇಕು ಅನ್ನೋ ಆಸೆಯಿದೆ ಎಂದು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಶಾಸಕ ಬಾಲಕೃಷ್ಣ ಹೇಳಿದರು.

 

Related