ಎರಡು ತಿಂಗಳ ಬಳಿಕೆ ಇಳಿಕೆ ಕಂಡ ಟೊಮೆಟೊ

ಎರಡು ತಿಂಗಳ ಬಳಿಕೆ ಇಳಿಕೆ ಕಂಡ ಟೊಮೆಟೊ

ಕೋಲಾರ: ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ಟೊಮೆಟೊ ಬೆಲೆ ಸತತವಾಗಿ ಏರಿಕೆ ಕಂಡಿತ್ತು ಇದರಿಂದ ಟೊಮೆಟೊ ಕೊಳ್ಳಲು ಜನ ಹಿಂದೆಟು ಹಾಕುತ್ತಿದ್ದರು. ಆದರಿಗ ಕೆಂಪು ಸುಂದ್ರಿಗೆ ಸ್ವಲ್ಪ ಮಟ್ಟಿಗೆ ಬೆಲೆ ಕಡಿಮೆಯಾದಂತೆ ಕಾಣುತ್ತಿದೆ.

ಹೌದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 1500 ರೂ.ಗಳಿಗೆ ಮಾರಾಟವಾಗಿದೆ. ಇಂದು ಒಂದು ಬಾಕ್ಸ್ ಮೇಲೆ 800 ರೂ ಇಳಿಕೆಯಾಗಿದೆ. ಕಳೆದೆರಡು ತಿಂಗಳಿಂದ ನಾನೇ ಕೆಂಪು ಚಿನ್ನಅಂತಿದ್ದ ಟೊಮೆಟೊ ಬೆಲೆ ಕಡಿಮೆಯಾಗಿದೆ.

ಕೆಲ ತಿಂಗಳಿಂದ ಟೊಮೆಟೊ ಹದಿನೈದು ಕೆಜಿ ಬಾಕ್ಸ್ ಟೊಮೆಟೊ 2,300 ರಿಂದ 2,600 ರೂಪಾಯಿಗೆ ಮಾರಟವಾಗಿತ್ತು. ಅದರೆ ಕಳೆದೆರಡು ದಿನಗಳಿಂದ 15 ಕೆಜಿ ಬಾಕ್ಸ್ 1500 ರೂ ಮಾರಾಟವಾಗಿದೆ.  ಅಂದರೆ ಎರಡೆ ದಿನದಲ್ಲಿ ಬರೊಬ್ಬರಿ 800 ರೂ ಇಳಿಕೆಯಾಗಿದೆ.

ರಾಜ್ಯದ ಚಿತ್ರದುರ್ಗ, ಮಂಡ್ಯ, ಚಾಮರಾಜನಗರ ಸೇರಿದಂತೆ ಆಂಧ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿದೆ. ಈ ಹಿನ್ನಲೆ ಟೊಮೆಟೊ ಇಳಿಮುಖ ಕಾಣುತ್ತಿದೆ. ಸದ್ಯ ಎರಡು ತಿಂಗಳಿಂದ ಪ್ರತಿ ಕೆಜಿಗೆ.180 ರಿಂದ 200 ರೂ ಕೊಟ್ಟು ಟೊಮೆಟೊ ಖರೀದಿಸುತ್ತಿದ್ದ ಜನ ಸಾಮಾನ್ಯರು ಕಂಪು ಚಿನ್ನ ದರ ಇಳಿಕೆಯಾಗುತ್ತಿದ್ದಂತೆ ಗ್ರಾಹಕರ ಮುಖದಲ್ಲಿ ಖುಷಿ ಮೂಡಿದೆ.

(ವರದಿಗಾರ: ಕೋಲಾರ ರೆಡ್ಡಿ)

Related