10 ವರ್ಷಗಳ ನಂತರ ಮತ್ತೆ ಒಂದೇ ತೆರೆ ಮೇಲೆ ಮಿಂಚಲಿರುವ ಈ ಜೋಡಿ

10 ವರ್ಷಗಳ ನಂತರ ಮತ್ತೆ ಒಂದೇ ತೆರೆ ಮೇಲೆ ಮಿಂಚಲಿರುವ ಈ ಜೋಡಿ

ನಟಿ ಪೂಜಾ ಹೆಗ್ಡೆಯವರು ಇಷ್ಟು ದಿನ ಬಾಲಿವುಡ್ ನಲ್ಲಿ ನಟನೆ ಮಾಡಿದ್ದು ಅಲ್ಲಿ ಸರಿಯಾದ ಹೆಸರು ಮಾಡದ ಕಾರಣ ಮತ್ತೆ ಇದೀಗ ಪೂಜೆ ಹೆಗ್ಡೆ ಟಾಲಿವುಡ್ ಚಿತ್ರರಂಗಕ್ಕೆ ಮರಳಿದ್ದಾರೆ ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿದ್ದು, ನಟ ನಾಗ ಚೈತನ್ಯ ಜೊತೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ನಟಿ ಪೂಜಾ ಹೆಗ್ಡೆಯವರು ಟಾಲಿವುಡ್ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಹಿ ಎನಿಸಿಕೊಂಡಿದ್ದಾರೆ.

ಮತ್ತೆ ಇದೀಗ ಟಾಲಿವುಡ್ ನಲ್ಲಿ ಮತ್ತಷ್ಟು ಕಮಾಲ್ ಮಾಡಲು ನಾಗಚೈತನ್ಯವರ ಜೊತೆ ತೆರ ಮೇಲೆ ಮಿಂಚಲಿದ್ದಾರೆ ಎಂಬ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು, ಸಿನಿಮಾ ಕೆರಿಯರ್ ಶುರು ಮಾಡಿದ ನಟನ ಜೊತೆಯೇ ಪೂಜಾ ಹೆಗ್ಡೆ ರೊಮ್ಯಾನ್ಸ್ ಮಾಡೋಕೆ ಮುಂದಾಗಿದ್ದಾರೆ. ಈ ಹಿಂದೆ ತೆರೆಕಂಡಿದ್ದ ‘ಒಕಾ ಲೈಲಾ ಕೋಸಂ’ ಚಿತ್ರದಲ್ಲಿ ನಾಗಚೈತನ್ಯಗೆ ಜೋಡಿಯಾಗುವ ಮೂಲಕ ಪೂಜಾ ಹೆಗ್ಡೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೀಗ 10 ವರ್ಷಗಳ ನಂತರ ನಾಗಚೈತನ್ಯ ನಟನೆಯ ಹೊಸ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.

 

Related