ಉಗ್ರರಿಂದ ಮೂರು ಜಿಲ್ಲೆ ಸೇನೆಯ ವಶಕ್ಕೆ

ಉಗ್ರರಿಂದ ಮೂರು ಜಿಲ್ಲೆ ಸೇನೆಯ ವಶಕ್ಕೆ

ಆಫ್ಘನ್:  ಉಗ್ರರ ವಿರುದ್ಧ ಹೋರಾಡುತ್ತಿರುವ ಆಫ್ಘನ್ ಸೇನಾ ಪಡೆ ಮೂರು ಜಿಲ್ಲೆಗಳನ್ನು ವಶಪಡಿಸಿಕೊಂಡಿದೆ. 40 ತಾಲಿಬಾಲಿಗಳನ್ನು ಸೇನೆ ಸಂಹರಿಸಿದ್ದು, ದೇಶವನ್ನು ವಶಪಡಿಸಿಕೊಂಡ ತಾಲಿಬಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

ಉತ್ತರ ಬಾಘ್ಲಾನ್ ಪ್ರಾಂತ್ಯದ ಪೊಲ್-ಇ-ಹೆಸರ್, ದೇಹ್ ಸಲಾಹ್ ಮತ್ತು ಕ್ವಾಸಾನ್ ಜಿಲ್ಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಾಲಿಬಾನ್ ಉಗ್ರರನ್ನು ಹತ್ತಿಕ್ಕುವುದು ನಮ್ಮ ಕರ್ತವ್ಯ ಪೊಲ್-ಇ-ಹೆಸರ್, ದೇಹ್ ಸಲಾಹ್, ಬಾನು ಜಿಲ್ಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮಹಮ್ಮದಿ ಟ್ವೀಟ್ ಮಾಡಿದ್ದಾರೆ.

ಈ ಹೋರಾಟದಲ್ಲಿ 40 ತಾಲಿಬಾನಿಗಳು ಸಾವನ್ನಪ್ಪಿದ್ದಾರೆ, 15 ಜನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಅಮೇರಿಕ ಸೇನೆ ಹಿಂಪಡೆದ ಬೆನ್ನೆಲೆ, ತಾಲಿಬಾನಿಗಳು ಆಫ್ಘನ್‍ನನ್ನು ವಶಕ್ಕೆ ಪಡಿಸಿಕೊಂಡಿದ್ದು, ತಾಲಿಬಾನಿಗಳ ಅಟ್ಟಹಾಸಕ್ಕೆ ಆಫ್ಘನ್ ನಾಗರಿಕರು ಬೆಚ್ಚಿಬಿದ್ದಾರೆ.

Related