ನಟಿ ಮಾಲಾಶ್ರೀ ಪತಿ ರಾಮು ಕೊರೋನಾಗೆ ಬಲಿ

ನಟಿ ಮಾಲಾಶ್ರೀ ಪತಿ ರಾಮು ಕೊರೋನಾಗೆ ಬಲಿ

ಬೆಂಗಳೂರು : ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅವರು ಕೊರೋನ ಸೊಂಕಿಗೆ ಬಲಿಯಾಗಿದ್ದರೆ.
ಕಳೆದ ಒಂದು ವಾರದ ಹಿಂದೆ ಅವರಿಗೆ ಕೊರೋನ ಇರೋದು ಪತ್ತೆಯಾಗಿತ್ತು, ಚಿಕಿತ್ಸೆಗಾಗಿ ಮೂರು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಸೋಂಕಿನಿಂದ ಬಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಕನ್ನಡದ ಪ್ರಖ್ಯಾತ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿ ಕೋಟಿ ನಿರ್ಮಾಪಕ ರಾಮು ಅಂತ ಹೆಸರು ಪಡೆದುಕೊಂಡಿದ್ದರು.

Related