ಗ್ರಾಮಗಳಿಗೆ ಉಚಿತ ಲಸಿಕೆ ಕಲ್ಪಿಸಿದ ‘ನಟ’

ಗ್ರಾಮಗಳಿಗೆ ಉಚಿತ ಲಸಿಕೆ ಕಲ್ಪಿಸಿದ ‘ನಟ’

ಹೈದರಾಬಾದ್ : ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಾವು ದತ್ತು ಪಡೆದಿರುವ ಎರಡು ಹಳ್ಳಿಗಳ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ವ್ಯವಸ್ಥೆ ಮಾಡಿದ್ದಾರೆ.

ತಮ್ಮ ಶ್ರೀಮಂತಡು ಸಿನಿಮಾ ಬಿಡುಗಡೆಯ ನಂತರ ಆಂಧ್ರ ಪ್ರದೇಶದ ಬರಿಪಲೇಮ್ ಹಾಗೂ ಸಿದ್ದಪುರಂ ಎಂಬ ಎರಡು ಹಳ್ಳಿಗಳನ್ನು ಮಹೇಶ್ ಬಾಬು ಅವರು ದತ್ತು ಪಡೆದರು.
ಗ್ರಾಮಗಳ ಅಭಿವೃದ್ಧಿಯ ಹರಿಕಾರ ಆಗಿರುವ ಅವರು, ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಕಲ್ಪಿಸಿಕೊಟ್ಟಿದ್ದಾರೆ. ಇದೀಗ ಕೋವಿಡ್ ಬಿಕ್ಕಟ್ಟಿನ ಹಳ್ಳಿಗಳ ಜನರ ನೆರವಿಗೆ ಧಾವಿಸಿದ್ದಾರೆ.

ಇನ್ನು ಮಹೇಶ್ ಬಾಬು ಅವರು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಭಾರತ ಸರ್ಕಾರವು 18 ವಯೋಮಾನದ ಮೇಲಿನವರು ಲಸಿಕೆ ಪಡೆಯಲು ಅವಕಾಶ ನೀಡಿರುವುದನ್ನು ಸ್ವಾಗತಿಸಿದ ಮಹೇಶ್ ಬಾಬು, ಎಲ್ಲರೂ ತಪ್ಪದೆ ಲಸಿಕೆ ಪಡೆಯುವಂತೆ ತಮ್ಮ ಅಭಿಮಾನಿಗಳಿಗೆ ಹಾಗೂ ಜನರಿಗೆ ತಿಳಿಹೇಳಿದ್ದರು.

Related