ನಟ ಜಯಂ ರವಿ- ಆರತಿ ದಾಂಪತ್ಯದಲ್ಲಿ ಬಿರುಕು..!

ನಟ ಜಯಂ ರವಿ- ಆರತಿ ದಾಂಪತ್ಯದಲ್ಲಿ ಬಿರುಕು..!

ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಡಿವೋರ್ಸ್​ ಕೇಸ್‌ಗಲು ಹೆಚ್ಚಾಗಿ ಕೇಳಿ ಬರುತ್ತಿವೆ. ಸ್ಯಾಂಡಲ್​ವುಡ್​ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಬೇರೆ ಬೇರೆಯಾಗಿದ್ದಾರೆ. ನಂತರ ದೊಡ್ಮನೆಯ ಯುವ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಇದರ ಬೆನ್ನಲ್ಲೇ ಡಿವೋರ್ಸ್‌ ಗಾಳಿ ಕಾಲಿವುಡ್​ಗೂ ಬಿಸಿದೆ… ಹೌದು, ಟಾಲಿವುಡ್ನಲ್ಲಿ ಸಮಂತಾ, ನಾಗಚೈತನ್ಯಗೆ ಡಿವೋರ್ಸ್ ನೀಡಿದ್ದಾರೆ. ಇದರ ಮಧ್ಯೆ ತಮಿಳು ಸಿನಿಮಾ ಕ್ಷೇತ್ರದಲ್ಲೂ ಈಗ ಡಿವೋರ್ಸ್ ಸದ್ದು ಮಾಡುತ್ತಿದ್ದು ಸ್ಟಾರ್ ನಟ ಜಯಂ ರವಿ ತನ್ನ ಹೆಂಡತಿ ಆರತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯುವಗೆ ಸಪ್ತಮಿ ಗೌಡ ಜೊತೆ ಸಂಬಂಧ; ಶ್ರೀದೇವಿ ಗಂಭೀರ ಆರೋಪ

ತಮಿಳು ನಟ ಜಯಂ ರವಿ ತಮಿಳು ಇಂಡಸ್ಟ್ರಿಯಲ್ಲಿ ತಮ್ಮದೇ ನಟನೆಯಿಂದ ಅಭಿಮಾನಿಗಳ ಮನ ಗೆದ್ದಂತವರು. ಇವರು ಪತ್ನಿ ಆರತಿಗೆ ಡಿವೋರ್ಸ್ ನೀಡುವ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಇಬ್ಬರ ಮಧ್ಯೆ ಬಿರುಕು ಇರುವುದಂತೂ ನಿಜ, ಒಂದೇ ಮನೆಯಲ್ಲಿ ಇಬ್ಬರು ಒಟ್ಟಿಗೆ ಇಲ್ಲವೆಂದು ಕಾಲಿವುಡ್​​ ಕ್ಷೇತ್ರದಲ್ಲಿ ಪಿಸು ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಚಂದನ್-ನಿವಿ ವಿಚ್ಛೇದನ ಅರ್ಜಿ ಸಲ್ಲಿಸಿದ ಮೇಲೆಯೂ ಜೊತೆಗೆ ಸುದ್ದಿಗೋಷ್ಠಿ..!

ಕಾಲಿವುಡ್​ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜಯಂ ರವಿ ಹಾಗೂ ಪತ್ನಿ ಆರತಿ ನಡುವೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯವಿದೆ. ಹೀಗಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಆರತಿ ತನ್ನ ಇನ್​ಸ್ಟಾದಲ್ಲಿ ಗಂಡನ ಎಲ್ಲ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಆದರೆ ಈ ಬಗ್ಗೆ ಜಯಂ ರವಿ ಎಲ್ಲಿಯು ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.

Related