ಆ್ಯಸಿಡ್ ಎರಚಿದ ಯುವತಿಯನ್ನು ಮದುವೆ ಆಗಿ ಲೈಫ್ ಕೊಡ್ತೇನೆ, ನಾನೊಬ್ಬ ಪಾಪಿ ಎಂದ ಆಸಿಡ್ ನಾಗ.!

  • In Crime
  • June 4, 2022
  • 262 Views
ಆ್ಯಸಿಡ್ ಎರಚಿದ ಯುವತಿಯನ್ನು ಮದುವೆ ಆಗಿ ಲೈಫ್ ಕೊಡ್ತೇನೆ, ನಾನೊಬ್ಬ ಪಾಪಿ ಎಂದ ಆಸಿಡ್ ನಾಗ.!

ಬೆಂಗಳೂರು,ಜೂ 04: ನಾನು ದೊಡ್ಡ ತಪ್ಪು ಮಾಡಿದೆ, ಆ್ಯಸಿಡ್ ಹಾಕಬಾರದಿತ್ತು. ಕನಸು-ಮನಸಲ್ಲೂ ಯೋಚನೆ ಮಾಡದ್ದನ್ನು ಮಾಡಿದೆ. ಕ್ಷಮಿಸಿ ನಾನೊಬ್ಬ ಪಾಪಿ ಎಂದು ಪೊಲೀಸರ ಮುಂದೆ ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾನೆ.

ನಗರದಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿ ಕಾಮಾಕ್ಷಿಪಾಳ್ಯ ಪೊಲೀಸರ ಬಂಧನದಲ್ಲಿರುವ ಆರೋಪಿ ಆ್ಯಸಿಡ್ ನಾಗ ವಿಚಾರಣೆ ವೇಳೆ ದೊಡ್ಡ ಹೈಡ್ರಾಮಾ ಮಾಡಿದ್ದಾನೆ. ಆ್ಯಸಿಡ್ ಹಾಕುವ ಮನಸ್ಸು ನನಗಿರಲಿಲ್ಲ. ನಾನು ಪ್ರೀತಿಸಿದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಅಂತ ಹೀಗೆ ಮಾಡಿದೆ.

ನನ್ನನ್ನು ಆಕೆ ಇಷ್ಟ ಪಡುತ್ತಿಲ್ಲ ಎಂದ ಕೂಡಲೇ ಕುಡಿತವೇ ಜೀವನವಾಯಿತು. ನಾನು ತಪ್ಪು ಮಾಡಿದೆ. ದೇವರು ಅದಕ್ಕೆ ನಿಮ್ಮ ಕೈಯಿಂದ ಶಿಕ್ಷೆ ಕೊಡಿಸಿಬಿಟ್ಟ. ಗುಂಡು ಹಾರಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದೀರಾ. ನನಗೆ ಕಾಲು ಮುರಿದಿರುವುದು ಸಣ್ಣ ಶಿಕ್ಷೆಯೇ, ನನ್ನನ್ನು ಗಲ್ಲಿಗೇರಿಸುವುದೇ ಅಂತಿಮ. ನನ್ನ ಕಾಲಿಗೆ ಗುಂಡು ಹಾರಿಸುವ ಬದಲು ನನ್ನ ಎದೆಗೆ ಗುಂಡು ಹಾರಿಸಿದ್ದರೆ ಒಳ್ಳೆಯದಾಗುತ್ತಿತ್ತು. ದಯವಿಟ್ಟು ನನಗೆ ಸರಿಯಾದ ಶಿಕ್ಷೆ ಸಿಗುವ ಹಾಗೇ ಮಾಡಿ. ಮುಂದಿನ ದಿನದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿರುತ್ತೇನೆ ಎಂದು ಹೇಳಿದ್ದಾನೆ.

Related