ಶೆಡ್‌ಗೆ ಆಕಸ್ಮಿಕ ಬೆಂಕಿ

ಶೆಡ್‌ಗೆ ಆಕಸ್ಮಿಕ ಬೆಂಕಿ

ನರಗುಂದ : ತಾಲೂಕಿನ ಕಣಕೀಕೊಪದಲ್ಲಿ ಪಡಿಯಪ್ಪ ಕೊಳ್ಳಿಯವರ ಹಾಕಿದ್ದ ಶೆಡ್‌ಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಅಪಾರ ಹಾನಿಯಾಗಿದೆ.

ಈ ಕುರಿತು ತಾಲ್ಲೂಕ ಆಡಳಿತ ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸಿ ಆ ರೈತರಿಗೆ ಪರಿಹಾರ ಒದಗಿಸುವಂತೆ ಮತ್ತು ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ತಹಶೀಲ್ದಾರ ಅನುಪಸ್ಥಿತಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯ ರೇಣುಕಾ ಚಿಗದನ್ನವರ ಅವರಿಗೆ ಕಣಕೀಕೊಪ್ಪ ಗ್ರಾಮಸ್ಥರು ಮನವಿ ಸಲ್ಲಿಸಿದರು.

ತಾಲ್ಲೂಕಿನ ಮೂರಾರ್ಜಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೊವೀಡ್ ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯಗಳಿಲ್ಲ ಹಾಗೂ ಊಟದ ವ್ಯವಸ್ಥೆ ಚೆನ್ನಾಗಿಲ್ಲ. ಶೌಚಾಲಯ ಹಾಗೂ ಸ್ನಾನಗೃಹದ ಮುಂಬಾಗಿಲುಗಳು ಕಿತ್ತುಹೋಗಿವೆ.

ಶುದ್ಧ ಕುಡಿಯುವ ನೀರು ಸ್ವಚ್ಚತೆ ಇಲ್ಲವೆಂದು ಸುದ್ದಿವಾಹನಿಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಇತ್ತೀಚಿಗೆ ಪ್ರಕಟವಾಗಿದ್ದು ಇಂತಹ ನಿರ್ಲಕ್ಷö್ಯತನ ತಾಲ್ಲೂಕ ಆಡಳಿತದಿಂದ ಸರಿಯಲ್ಲ. ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹೆಚ್ಚು ಹಣಕಾಸಿನ ವ್ಯವಸ್ಥೆ ಮಾಡಿದೆ. ತಾಲ್ಲೂಕ ಆಡಳಿತ ಎಚ್ಚೆತ್ತು ಕೋವಿಡ್ ಆಸ್ಪತ್ರೆಯನ್ನು ಸೂವ್ಯವಸ್ಥೆಯಲ್ಲಿಡುವಂತೆ ಬೇಡಿಕೆ ಮುಂದಿರಿಸಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

Related