ಆ್ಯಂಬುಲೆನ್ಸ್ ಡಿಕ್ಕಿ ಏಳು ಮಂದಿ ಸಾವು..!

  • In Crime
  • May 31, 2022
  • 252 Views
ಆ್ಯಂಬುಲೆನ್ಸ್ ಡಿಕ್ಕಿ ಏಳು ಮಂದಿ ಸಾವು..!

ಡಿವೈಡರ್ ಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್ ಟ್ರಕ್ಗೆ ಗುದ್ದಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಏಳು ಜನರು ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಭರೇಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬುಧವಾರ ಮುಂಜಾನೆ ತಮ್ಮ ಊರಾದ ಫಲ್ಬಿತ್ಗೆ ಹಿಂದಿರುಗುತ್ತಿದ್ದಾಗ ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ.

ಚಾಲಕನ ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್ ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದು ನಂತರ ಎದುರಿಗೆ ಬರುತ್ತಿದ್ದ ಟ್ರಕ್ಗೆ ಗುದ್ದಿದೆ. ಪರಿಣಾಮ ಚಾಲಕ ಹಾಗೂ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

Related