ಬೆಳಂಬೆಳಿಗ್ಗೆ ಆರ್‌ಟಿಒ ಮನೆ ಮೇಲೆ ಎಸಿಬಿ ದಾಳಿ

ಬೆಳಂಬೆಳಿಗ್ಗೆ ಆರ್‌ಟಿಒ ಮನೆ ಮೇಲೆ ಎಸಿಬಿ ದಾಳಿ

ಮಂಡ್ಯ : ಬೆಳ್ಳಂಬೆಳಿಗ್ಗೆ ಆರ್‌ಟಿಒ ಪ್ರಥಮ ದರ್ಜೆ ಸಹಾಯಕ ಎ.ವಿ ಚನ್ನವೀರಪ್ಪ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಆರೋಪದ ಮೇರೆಗೆ ನಗರದ ಕುವೆಂಪುನಗರದಲ್ಲಿದ್ದ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ, ಅಧಿಕಾರಿ ಸ್ವಂತ ಗ್ರಾಮವಾದ ಆಲಕೆರೆಯಲ್ಲೂ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಎ.ವಿ.ಚನ್ನವೀರಪ್ಪ ಸಾರಿಗೆ ಇಲಾಖೆಯ ಆಯುಕ್ತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ ಮೈಸೂರಿನ ಆರ್‌ಟಿಓ ಕಚೇರಿಯಲ್ಲಿ ಎಫ್‌ಡಿಎ ಅಧಿಕಾರಿಯಾಗಿದ್ದಾರೆ.

Related