ಬೆಳ್ಳಂಬೆಳಗ್ಗೆ ಜೆಇ ಮನೆ ಮೇಲೆ ಎಸಿಬಿ ದಾಳಿ

ಬೆಳ್ಳಂಬೆಳಗ್ಗೆ ಜೆಇ ಮನೆ ಮೇಲೆ ಎಸಿಬಿ ದಾಳಿ

ಕಲಬುರ್ಗಿ : ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಚನ್ನಬಸಪ್ಪ ಅವರಿಗೆ ಸೇರಿದ ಅಪಾರ್ಟ್ಮೆಂಟ್ ಮೇಲೆ ಬೆಳಿಗ್ಗೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು 1.5 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.

ದಾಖಲಾತಿಗಳ ಪರಿಶೀಲನೆ ಬಳಿಕ ಮತ್ತಷ್ಟು ಅಕ್ರಮ ಆಸ್ತಿ ಗಳಿಕೆಯಲ್ಲಿ ಹೆಚ್ಚಳ ಸಾಧ್ಯತೆ ಎಂದರು.

ಹಳೆ ಜೇವರ್ಗಿ ರಸ್ತೆಯಲ್ಲಿ 8 ಫ್ಲ್ಯಾಟ್‌ಗಳ ಅಪಾರ್ಟ್ಮೆಂಟ್ ಹೊಂದಿರುವ ಚನ್ನಬಸಪ್ಪ ಅವರು ಚಿಂಚೋಳಿ ತಾಲೂಕಿನ ಮೊಗದಮಪುರದಲ್ಲಿ 23 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 3 ಎಕರೆ ಕೃಷಿ ಜಮೀನು ಪತ್ತೆಯಾಗಿದೆ.

ಕಲಬುರ್ಗಿಯ ಕರುಣೇಶ್ವರ ನಗರದಲ್ಲಿ ಖುಷಿ ಡೆವಲಪರ್ಸ್ ಅಪಾರ್ಟ್ಮೆಂಟ್ ಹೊಂದಿದ್ದಾರೆ ಎಂದು ಎಸಿಬಿ ಎಸ್.ಪಿ ಮಹೇಶ್ ಮೇಘಣ್ಣನವರ ಹೇಳಿದರು.

Related