ನೀರಿನ ರಭಸಕ್ಕೆ ಕೊಚ್ಚಿಹೋದ ಯುವಕ

ನೀರಿನ ರಭಸಕ್ಕೆ ಕೊಚ್ಚಿಹೋದ ಯುವಕ

ಬೆಳಗಾವಿ: ಬೆಳಗಾವಿ ತಾಲೂಕಿನ ನಾನಾವಾಡಿಯಲ್ಲಿ ತುಂಬಿ ಹರಿಯುತ್ತಿರುವ ನೀರಲ್ಲಿ ಬೈಕ್ ಸವಾರನೊಬ್ಬ ಬೈಕ್ ಉಳಿಸಿಕೊಳ್ಳಲು ಹೋಗಿ ತಾನೇ ಕೊಚ್ಚಿಹೋದ ಘಟನೆ ಸಂಭವಿಸಿದೆ.

ನಾನಾವಾಡಿ ಹೊರವಲಯದ ಹಳ್ಳ ದಾಟುವಾಗ ಬೈಕ್ ಸವಾರ ಅಪಾಯಕ್ಕೆ ಸಿಲುಕಿದ್ದ. ಕೂಡಲೇ ಸ್ಥಳೀಯರು ಯುವಕನ ರಕ್ಷಣೆಗೆ ಧಾವಿಸಿದ್ದರಾದರೂ ಬೈಕ್ ಜತೆಯೇ ಹಳ್ಳದ ದಡ ಹರಸಾಹಸ ಪಡುತ್ತಿದ್ದ ಯುವಕ ನೀರಿನ ರಭಸಕ್ಕೆ ನೀರಲ್ಲಿ ಕೊಚ್ಚಿಹೋದ ದೃಶ್ಯ ವೈರಲ್ ಆಗಿದೆ. ಇನ್ನೂ ಯುವಕ ಪತ್ತೆಯಾಗಿಲ್ಲ.

 

Related