ಅಭಿಮಾನಿಗಳಿಗೆ ಕಿಚ್ಚನ ಸಂದೇಶ

ಅಭಿಮಾನಿಗಳಿಗೆ ಕಿಚ್ಚನ ಸಂದೇಶ

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿಕಿಚ್ಚ ಸುದೀಪ್ ಪಾಲಿಗೆ ನಾಳೆ (ಸೆ.2) ವಿಶೇಷ ದಿನ. ಅವರ ಜನ್ಮದಿನವಾಗಿದ್ದು ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಅವರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ವಾಡಿಕೆ ಆದರೆ ಈ ಬಾರಿ ದೇಶಾದ್ಯಂತ ಕೊರೋನಾ ಹಾವಳಿಯ ಕಾರಣ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಬಿದ್ದಿದೆ.

ಸಾಮಾಜಿಕ ತಾಣದ ಮೂಲಕ ಸುದೀಪ್ ಅಭಿಮಾನಿಗಳಿಗೆ ಮನವಿ ಮಾಡಿದ್ದು ಈ ಬಾರಿ ಅಭಿಮಾನಿಗಳಾರೂ ನನ್ನ ಸಂಭ್ರಮದ ಹುಟ್ಟುಹಬ್ಬ ಆಚರಸಿರುವುದು ಬೇಡ. ಬದಲಿಗೆ ತಾವು ಇದ್ದಲ್ಲಿಂದಲೇ ಶುಭ ಹಾರೈಸಿ ಎಂದಿದ್ದಾರೆ.

Related