ಶಾಲೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ

ಶಾಲೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ

ಜಗತ್ತಿನಲ್ಲಿ ಎರಡೇ ಲಿಂಗಗಳು ಇರುವುದು ಎಂದು ಹೇಳಿ ಶಾಲೆಯಿಂದ ಶಿಸ್ತಿನ ಕ್ರಮ ಎದುರಿಸಿದ ಟೀನೇಜ್ ವಿದ್ಯಾರ್ಥಿಯೊಬ್ಬ ತನ್ನ ಶಾಲಾಡಳಿತದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾನೆ.

ಅಮೆರಿಕದ ನ್ಯೂ ಹ್ಯಾಂಪ್ ಶೈರ್‌ನ ಎಕ್ಸೆಟರ್ ಪ್ರೌಢಶಾಲೆಯ ವಿದ್ಯಾರ್ಥಿಯಾದ ಈತ ನ.4 ರಂದು ಕೋರ್ಟ್ನಲ್ಲಿ ದಾವೆಯಲ್ಲಿ ತನ್ನ ಸ್ನೇಹಿತನೊಂದಿಗೆ ನಡೆಸಿದ ನಂವಹನವೊಂದರ ವೇಳೆ ‘ಇರುವುದು ಎರಡೇ ಲಿಂಗ’ ಎಂದು ಹೇಳಿದ ಕಾರಣಕ್ಕೆ ತನ್ನ ಶಾಲೆಯ ಫುಟ್ಬಾಲ್ ತಂಡದಿಂದ ಒಂದು ಪಂದ್ಯದ ಮಟ್ಟಿಗೆ ಹೊರಗೆ ಹಾಕಲಾಗಿತ್ತು.

ನ್ಯೂ ಹ್ಯಾಂಪ್‌ಶೈರ್‌ನ ಹಕ್ಕುಗಳ ಕಾಯಿದೆಯನ್ನು ತನ್ನ ಶಾಲಾಡಳಿತ ಉಲ್ಲಂಘಿಸಿದ್ದು, ಸಾಂವಿಧಾನಿಕವಾಗಿ ತನಗೆ ಸಿಕ್ಕವಾಕ್ ಸ್ವಾತಂತ್ರö್ಯವನ್ನು ಈ ಕ್ರಮದ ಮೂಲಕ ಕಿತ್ತುಕೊಂಡಂತಾಗಿದೆ ಎಂದು ವಿದ್ಯಾರ್ಥಿ ಆಗ್ರಹಿಸಿದ್ದಾನೆ.

ವಿದ್ಯಾರ್ಥಿಗಳಿಗೆ ತಮ್ಮ ಹೆಸರು ಹಾಗೂ ತಮ್ಮ ಲಿಂಗಾನುಸಾರ ಸರ್ವನಾಮಪದದ ಮೂಲಕ ಕರೆಯಿಸಿಕೊಳ್ಳುವ ಹಕ್ಕಿದೆ ಎಂದು ಶಾಲೆಯ ನೀತಿಯಲ್ಲಿ ತಿಳಿಸಲಾಗಿದೆ. ಶಾಲೆಯ ಈ ಕ್ರಮವು ಶಾಸನಾತ್ಮಕವಾಗಿ ಕೊಡಮಾಡಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕ್ಯಾಥೋಲಿಕ್ ಆಗಿರುವ ಕಾರಣ ವಿದ್ಯಾರ್ಥಿಯನ್ನು ಹೀಗೆ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಕೋರ್ಟ್ಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಲಾಗಿದೆ.

Related