ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಯಾದಗಿರಿ : ತಾಲ್ಲೂಕಿನ ರಾಮಸಮುದ್ರ ಗ್ರಾಮದ ಮಹಿಳೆ ಪದ್ಮಮ್ಮ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದು, ಮೂರು ನವಜಾತು ಶಿಶುಗಳು ಆರೋಗ್ಯವಾಗಿವೆ. 7 ವರ್ಷದ ನಂತರ ಹೆರಿಗೆ ಆಗಿದ್ದು, ಮೊದಲು ಮಗಳಿಗೆ ವರ್ಷ ಇದೆ. ಕಳೆದ 6 ದಿನಗಳಿಂದ ರಾಮಸಮುದ್ರದ ಆಶಾ ಕಾರ್ಯಕರ್ತೆಯರಾದ ಮಂಗಳಮ್ಮ, ಮುತ್ತಮ್ಮ ಅವರು ಪದ್ಮಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು.

ಸಹಾಯಕ್ಕಾಗಿ ಮೊರೆ ಇಟ್ಟ ಕುಟುಂಬ : ಪದ್ಮಮ್ಮ ಪತಿ ನಾಗರಾಜ ಅವರು ಕೂಲಿ ಮಾಡುವ ಕುಟುಂಬ. ಮೂರು ಮಕ್ಕಳ ಲಾಲನೆ, ಪೋಷಣೆಗೆ ದಾನಿಗಳ ಸಹಾಯಕ್ಕೆ ಮೊರೆ ಇಟ್ಟಿದ್ದಾರೆ. ಈ ಕುರಿತು ಮಾತನಾಡಿದ ನಾಗರಾಜ ಅವರು, ‘ಗ್ರಾಮದಿಂದ ಆಹಾರ ತರುತ್ತಿದ್ದೇನೆ. ತಾಯಿಗೆ ಎದೆ ಹಾಲು ಸಾಲುತ್ತಿಲ್ಲ. ಇದರಿಂದ ವೈದ್ಯರು ಪೌಡರ್ ಬರೆದುಕೊಟ್ಟಿದ್ದಾರೆ. ದರ ಹೆಚ್ಚಿರುವ ಕಾರಣ ಖರೀದಿಸಲು ಆಗಿಲ್ಲ. ಹೆರಿಗೆ ವೇಳೆ ರಕ್ತಕ್ಕಾಗಿ ಇದ್ದ ಹಣ ಖರ್ಚು ಮಾಡಿಕೊಂಡಿದ್ದೇನೆ. ಹೀಗಾಗಿ ಯಾರಾದರೂ ಸಹಾಯ ಮಾಡಬೇಕು ಎಂದು ಕೋರಿದ್ದಾರೆ.

ಸಹಾಯ ಮಾಡಲು ಇಚ್ಛಿಸುವವರು ನಾಗರಾಜ ಅವರ ಮೊಬೈಲ್ ಸಂಖ್ಯೆ 78928 44564ಗೆ ಸಂಪರ್ಕಿಸಬಹುದು. ಖಾತೆಯ ವಿವರ ಂ/ಅ ಓಔ: 52206440261,

Related