ಮಹಿಳಾ ಹಾಕಿ ತಂಡಕ್ಕೆ ನಿರಾಸೆ

ಮಹಿಳಾ ಹಾಕಿ ತಂಡಕ್ಕೆ ನಿರಾಸೆ

ಟೋಕಿಯೊ : ಭಾರತೀಯ ಮಹಿಳೆಯರ ತಂಡ ಶುಕ್ರವಾರ ನಗರದ ಓಯ್ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ 3-4 ಅಂತರದಿಂದ ಬ್ರಿಟನ್ ವಿರುದ್ಧ ಕಂಚಿನ ಪದಕ ಕಳೆದುಕೊಂಡಿತು. ಸೆಮಿ ಫೈನಲ್‌ಗೆ ಬಂದ ಮೊದಲ ಮಹಿಳಾ ಹಾಕಿ ತಂಡವಾಗಿ ಒಲಂಪಿಕ್ಸ್ ನಲ್ಲಿ ಭಾರತ ಇತಿಹಾಸ ನಿರ್ಮಿಸಿದರು. ಅವರಿಗೆ ಈ ಪಂದ್ಯ ನಿರಾಸೆ ತಂದಿದೆ.
ಭಾರತದ ಪುರುಷರ ತಂಡದಂತೆ ಮಹಿಳಾ ತಂಡವೂ ಒಲಿಂಪಿಕ್ಸ್ನಲ್ಲಿ ಕಂಚು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಬಹುದು ಎಂಬ ನಿರೀಕ್ಷೆ ತಪ್ಪೊಯಿತ್ತು. ಪಂದ್ಯ ಆರಂಭದಲ್ಲೇ ಬ್ರಿಟನ್ ಎರಡು ಗೋಲುಗಳನ್ನು ಬಾರಿಸಿ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿತ್ತು. ಬಳಿಕ ಭಾರತ ತಂಡ ಮೂರು ಗೋಲುಗಳನ್ನು ಹೊಡೆದು ಮೊದಲಾರ್ಧದಲ್ಲೇ ಮುನ್ನಡೆ ಕಂಡಿತ್ತು.ಅಂತಿಮವಾಗಿ ಭಾರತ ತಂಡ 3-4 ಗೋಲುಗಳ ಅಂತರದಿಂದ ಬ್ರಿಟನ್ ವಿರುದ್ಧ ಸೋಲು ಕಂಡಿದೆ. ಪ್ರಧಾನಿ ಪಂದ್ಯದ ಬಳಿಕ ಫೋನ್ ಮೂಲಕ ಭಾರತದ ಹಾಕಿ ಆಟಗಾರ್ತಿಯರೊಂದಿಗೆ ಮಾತನಾಡಿದರು.

Related