ಚಿಕನ್ ಪ್ರಿಯರಿಗೊಂದು ಎಚ್ಚರಿಕೆ!

  • In State
  • February 11, 2020
  • 414 Views
ಚಿಕನ್ ಪ್ರಿಯರಿಗೊಂದು ಎಚ್ಚರಿಕೆ!

ನವದೆಹಲಿ, ಫೆ. 11 : ಕೊರೊನಾ ವೈರಸ್ ಸೋಂಕು ಹೇಗೆ ಹರಡುತ್ತದೆ ನಿಮಗೆ ತಿಳಿದಿದೆಯೇ? ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಸೋಂಕು ಪಸರಿಸುತ್ತದೆಯೇ? ಇಂದು ಇಂತಹುದೇ ಹಲವಾರು ಪ್ರಶ್ನೆಗಳು ನಿಮ್ಮ ಮನದಲ್ಲಿ ಮನೆ ಮಾಡಿರಬಹುದು. ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಅಲರ್ಟ್ ವೊಂದನ್ನು ಜಾರಿಗೊಳಿಸಿದ್ದು, ಚಿಕನ್ ಹಾಗೂ ಮೊಟ್ಟೆ ತಿನ್ನುವುದಕ್ಕೂ ಮುನ್ನ ಚೆನ್ನಾಗಿ ಬೇಯಿಸಿ ಸೇವಿಸಲು ಸೂಚಿಸಿದೆ. ಇಂತಹುದರಲ್ಲಿ ಈ ಕುರಿತು ಶಂಕೆ ವ್ಯಕ್ತವಾಗುವುದು ಸಾಮಾನ್ಯವಾಗಿದೆ. ವಿಭಿನ್ನ ವರದಿಗಳ ಪ್ರಕಾರ ಚೀನಾದಲ್ಲಿ ಕರೋನಾ ವೈರಲ್ ಸೋಂಕು ಹರಡಿದ ಬಳಿಕ ಭಾರತದಲ್ಲಿ ಚಿಕನ್ ಮಾರಾಟದಲ್ಲಿ ಇಳಿಕೆಯಾಗಿದೆ. ಅಂಕಿ-ಅಂಶಗಳ ಪ್ರಕಾರ ದೇಶಾದ್ಯಂತ ಚಿಕನ್ ಮಾರಾಟದಲ್ಲಿ ಶೇ.10-ಶೇ.15ರಷ್ಟು ಇಳಿಕೆಯಾಗಿದೆ. ಕಳೆದ ಬಾರಿ ಸಾರ್ಸ್ ವೈರಸ್ ಕೂಡ ಚಿಕನ್ ನಂತಹ ಪದಾರ್ಥಗಳಿಂದ ಹರಡಿದ್ದು, ಕರೋನಾ ವೈರಸ್ ಕೂಡ ಸಾರ್ಜ್ ಪ್ರಜಾತಿಗೆ ಸೇರಿದ್ದಾಗಿದೆ. ಇದೆ ಕಾರಣದಿಂದ ಚಿಕನ್ ಸೇವಿಸುವ ಜನರಲ್ಲಿ ಚಿಕನ್ ಸೇವನೆಯ ಪ್ರಮಾಣ ಇಳಿಕೆಯಾಗಿದೆ ಎನ್ನಲಾಗಿದೆ.

Related