ಕೊನೆಗೂ ಬಲೆಗೆ ಬಿದ್ದ ನರಭಕ್ಷಕ

ಕೊನೆಗೂ ಬಲೆಗೆ ಬಿದ್ದ ನರಭಕ್ಷಕ

ಬೆಂಗಳೂರು: ಬೊಮ್ಮನಹಳ್ಳಿ ಕೂಡ್ಲು ಗೇಟ್‌ ಬಳಿ ಕಳೆದ ಮೂರು ನಾಲ್ಕು ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿದ್ದರಿಂದ ನಗರವಾಸಿಗಳು ನೆಮ್ಮದಿಯಿಂದ ನಿಟ್ಟುಸಿರು ಬಿಡಲು ಭಯಪಡುತ್ತಿದ್ದರು. ಆದರಿಗ ಶಾಸಕಾ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಇಂದು ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ಅವರು, ನಗರದಲ್ಲಿ ಮೂರ್ನಾಲ್ಕು ದಿನದಿಂದ ನಿರಂತರವಾಗಿ ನಿದ್ದೆ, ಊಟ ಇಲ್ಲದೆ  ಅರಣ್ಯ ಅಧಿಕಾರಿಗಳು ಹೆಚ್ಚು ಶ್ರಮ ಪಟ್ಟಿದ್ದಾರೆ. ಈ ಎಲ್ಲಾ ಶ್ರೇಯಸ್ಸು ಅರಣ್ಯ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸಲ್ಲಬೇಕು ಎಂದು  ಹೇಳಿದ್ದಾರೆ.

ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದೇವೆ. ಆದರೆ ನೋವಿನ ಸಂಗತಿ ಏನೆಂದರೆ ಚಿರತೆ ಜೀವಂತ ಇದಿಯೋ ಇಲ್ಲವೋ ಎಂಬುದು ಇನ್ನು ತಿಳಿದು ಬಂದಿಲ್ಲ ಹಾಗಾಗಿ ಚಿರತೆಯನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.

ಚಿರತೆಯನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಕೆಲವು ಅರಣ್ಯ ಅಧಿಕಾರಿಗಳಿಗೆ ಗಾಯವಾಗಿದೆ ಈ ಗಾಯಗೊಂಡ ಅಧಿಕಾರಿಗಳಿಗೆ ಆಸ್ಪತ್ರೆ ವೆಚ್ಚವನ್ನು ನನ್ನ ಸ್ವಯಿಚ್ಛೆಯಿಂದ ಎರಡು ಲಕ್ಷ ಹಣವನ್ನು ನೀಡುತ್ತೇನೆ ಎಂದು ಈ ಸಂದರ್ಭದಲ್ಲಿ ಶಾಸಕ ಸತೀಶ್ ರೆಡ್ಡಿ ಅವರು ಹೇಳಿದರು.

Related