ಯೋಗದಿಂದ ರೋಗ ದೂರ ಎಂದ 72 ವಯಸ್ಸಿನ ವೃದ್ಧೆ

ಯೋಗದಿಂದ ರೋಗ ದೂರ ಎಂದ 72 ವಯಸ್ಸಿನ ವೃದ್ಧೆ

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಒತ್ತಡದ ಕೆಲಸ. ಒತ್ತಡದ ಆಲೋಚನೆ ಇಂದಾಗಿ ನಮ್ಮ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಕಾಪಾಡಿಕೊಳ್ಳಲು ನಾವು ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ರೋಗಗಳನ್ನು ದೂರ ಮಾಡಬಹುದೆಂದು 72ರ ಇಳಿಯ ವಯಸ್ಸಿನ ಅಜ್ಜಿ ಒಬ್ಬರು ಹೇಳಿದ್ದಾರೆ.

ಹೌದು, ಅಜ್ಜಿ ಯೋಗಾಸನ ಯೋಗ ಪಟುಗಳೇ ಹುಬ್ಬೇರಿಸಬೇಕು, ಯೋಗದಿಂದ ರೋಗ ದೂರ ಮಾಡಿಕೊಂಡ 72ರ ವೃದ್ಧೆ

ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದೆ. ಹೀಗಾಗಿ ಆರೋಗ್ಯವನ್ನು ಉತ್ತಮವಾಗಿಸಲು ಯೋಗ ಅತಿ ಮುಖ್ಯ. ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್‌ 21 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತೆ. ಈ ಯೋಗ ಆರೋಗ್ಯ ಎಷ್ಟು ಸಹಾಯಕ ಅಂದ್ರೆ, ಈ ಅಜ್ಜಿ ಯೋಗದಿಂದಲೇ ತನ್ನ ರೋಗವನ್ನು ದೂರ ಮಾಡಿಕೊಂಡಿದ್ದಾರೆ. ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು.

ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು. ಯೋಗದಿಂದಲೇ ತನ್ನ ರೋಗ ದೂರ ಮಾಡಿಕೊಂಡಿದ್ದಾಳೆ ಈ ಅಜ್ಜಿ. 72 ರ ಇಳಿ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುವ ಅಜ್ಜಿ…

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ದ್ರಾಕ್ಷಾಯಿಣಿ ವಡಗೇರಿ 72 ರ ಇಳಿ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುತ್ತಾರೆ, ನಿತ್ಯ ಬೆಳಗ್ಗೆ 5.30 ಕ್ಕೆ ವಾಕಿಂಗ್ ಹೋಗುವ ಅಜ್ಜಿ ಬಳಿಕ ರಸ್ತೆ ಬದಿಯಲ್ಲೇ ಯೋಗಾಭ್ಯಾಸ ಮಾಡುತ್ತಾರೆ. ಆರ್ಥಿಕವಾಗಿ ಬಡವರಾಗಿರುವ ಈ ಮಹಿಳೆ ಆಸ್ಪತ್ರೆಗೆ ಖರ್ಚು ಮಾಡು ಶಕ್ತಿ ಇಲ್ಲದೇ ನಿತ್ಯ ವಾಕಿಂಗ್ ಯೋಗ ಮಾಡುವ ಮೂಲಕ ರೋಗ ದೂರ ಮಾಡಿಕೊಂಡಿದ್ದಾರೆ.

ಯಾರ ಟ್ರೈನಿಂಗ್ ಇಲ್ಲದೇ ಸ್ವಯಂ ಆಗಿ ಯೋಗದ ವಿವಿಧ ಆಸನಗಳನ್ನು ಮಾಡುವ ಅಜ್ಜಿ ಪ್ರತಿ ದಿನ ಏನೇ ತಪ್ಪಿದರೂ ಯೋಗ ಮಾಡುವುದು ತಪ್ಪಿಸಲ್ಲ ಅಂತಾರೆ. ಇದರಿಂದ ಆರೋಗ್ಯ ಸಂಪೂರ್ಣ ಸುಧಾರಣೆ ಆಗಿದೆ ಎನ್ನುವುದು ಅಜ್ಜಿಯ ಮಾತು.

ನಿತ್ಯ ಒಂದು ಗಂಟೆ ಯೋಗ ಮಾಡುವ ಅಜ್ಜಿ, 72ನೇ ವಯಸ್ಸಿನಲ್ಲಿ ಅಜ್ಜಿ ಮಾಡುವ ಯೋಗದ ಆಸನಗಳು ಅಚ್ಚರಿ ಮೂಡಿಸುತ್ತೆ.

ಬೆಳಗ್ಗೆ ವಾಕಿಂಗ್, ಯೋಗಾಭ್ಯಾಸದ ಬಳಿಕ ರಸ್ತೆ ಬದಿಯಲ್ಲಿ ಸಿಗುವ ಕಟ್ಟಿಗೆ ಆಯ್ದುಕೊಂಡು (ಅಡುಗೆ ಮಾಡಲು) ಹೋಗುವುದು ಅಭ್ಯಾಸವಾಗಿದೆ. ಅಲ್ಲದೇ ಯೋಗದಿಂದ ರೋಗ ದೂರ ಮಾಡಿಕೊಂಡ ವೃದ್ದೆ ಎಲ್ಲರಿಗೂ ಮಾದರಿಯಾಗಿದ್ದಾರೆ.

Related