ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದ ಶಿಕ್ಷಕ ಸಸ್ಪೆಂಡ್..!

  • In Crime
  • June 29, 2022
  • 385 Views
ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದ ಶಿಕ್ಷಕ ಸಸ್ಪೆಂಡ್..!

ತುಮಕೂರು, ಜೂ 29 : ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಅದರಲ್ಲಿಯೂ ತಮ್ಮ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರನ್ನು ಪೋಷಕರು ಅತ್ಯಂತ ಗೌರವದಿಂದ ಕಾಣುತ್ತಾರೆ.

ಕೊರೊನಾ ಬಂದ  ಬಳಿಕ ಶಾಲೆಗಳಲ್ಲಿ ಆನ್ ಲೈನ್ ಪಾಠಗಳು ಆರಂಭಗೊಂಡಿವೆ. ಇನ್ನೂ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಲು ಪೋಷಕರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ.

ಶಾಲೆಗಳು ಎಲ್ಲ ಮಕ್ಕಳ ಪೋಷಕರ ನಂಬರ್ ಪಡೆದು ವಾಟ್ಸಪ್ ಗ್ರೂಪ್ ರಚನೆ ಮಾಡಿ, ಪಾಠ, ಹೋಮ್ ವರ್ಕ್ ಸೇರಿದಂತೆ ಇತ್ಯಾದಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.

ಆದ್ರೆ ಇದನ್ನೇ ದುರುಪಯೋಗ ಮಾಡಿಕೊಂಡ ಶಿಕ್ಷಕನೋರ್ವ, ವಿದ್ಯಾರ್ಥಿಗಳ ತಾಯಂದಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಅಮಾನತುಗೊಂಡಿದ್ದಾನೆ.

ತುಮಕೂರು ಜಿಲ್ಲೆಯ ಮಧುಗಿರಿ ದೊಡ್ಡಹಟ್ಟಿ ಸರ್ಕಾರಿ ಶಾಲೆಯ ಸುರೇಶ್‌ ಅಮಾನತುಗೊಂಡ ಶಿಕ್ಷಕ. ಮಕ್ಕಳಿಂದ ಪೋಷಕರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದನು.

ಈ ಸಂಬಂಧ ಗ್ರಾಮದ ಮಹಿಳೆಯರು ಶಿಕ್ಷಕ ಸುರೇಶ್ ವಿರುದ್ಧ ಡಿಡಿಪಿಐ ಅವರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಅಧಿಕಾರಿಗಳು ತನಿಖೆ ನಡೆಸಿ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Related