ಅದ್ಧೂರಿಯಾಗಿ ಜರುಗಿದ ಶ್ರೀ ವೀರಾಂಜನೇಯ ಜಾತ್ರೆ

  • In Video
  • May 10, 2022
  • 276 Views

ಬಬಲೇಶ್ವರ : ಕೊರೋನಾ ಹಿನ್ನೆಲೆ ಗ್ರಾಮಗಳಲ್ಲಿನ ಜಾತ್ರೆಗಳ ಕಲರವ ಕಳೆಗುಂದಿತ್ತು. ಈ ವರ್ಷ ಸ್ವಲ್ಪಮಟ್ಟಿಗೆ ಕೋರನಾ ಹಾವಳಿ ಕಡಿಮೆಯಾದ ಕಾರಣ ಜಾತ್ರೆ, ಉತ್ಸವಗಳು ನಡೆಯುತ್ತಿರುವುದು ಜನತೆಯ ಮೊಗದಲ್ಲಿ ಸಂತಸ ತಂದಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದಾಶ್ಯಾಳ ಗ್ರಾಮದಲ್ಲಿನ ಗ್ರಾಮ ದೇವರಾದ ಶ್ರೀ ವೀರಾಂಜನೇಯ ಜಾತ್ರೆಯನ್ನು ಕೋವಿಡ್ ಕಾರಣದಿಂದ ಆಚರಣೆ ಮಾಡದೆ. ಈ ಬಾರಿ ಗ್ರಾಮದ ಎಲ್ಲ ವರ್ಗದ ಜನಾಂಗದವರು ಸೇರಿ ಈ ಜಾತ್ರೆಯನ್ನು ಅದ್ಧೂರಿಯಾಗಿ ಮತ್ತು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಸತತವಾಗಿ ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಒಂದು ನಿಮಿಷದ ಎತ್ತಿನ ಬಂಡಿ ಸರತಿ, ಸ್ಲೋ ಸೈಕಲ್ ಮೋಟಾರ ಸ್ಪರ್ಧೆ, ಟ್ರ‍್ಯಾಕ್ಟರ್ ರಿವರ್ಸ್ ಚಲಿಸುವ ಸ್ಪರ್ಧೆ, ಬೋಳ ದಿಂಡಿನ ಸ್ಪರ್ಧೆ ಮತ್ತು ಎರಡನೆ ದಿನ ಎತ್ತಿನ ಗಾಡಿ ಸ್ಪರ್ಧೆ, ಮ್ಯೂಸಿಕಲ್ ಚೇರ್, ಪುರುಷರ ಓಟದ ಸ್ಪರ್ಧೆಗಳನ್ನು ಆಯೋಜನೆ ಮಾಡಿಲಾಗಿತ್ತು. ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವಂತಹ ಸ್ಪರ್ಧಾರ್ಥಿಗಳನ್ನು ಸ್ಪರ್ಧಿಸಿ ಗೆದ್ದು ಸಂತಸಪಟ್ಟರು.

ಈ ವರ್ಷದ ಜಾತ್ರೆಯ ವಿಶೇಷವೆಂದರೆ ಮೂರುದಿನಗಳ ಕಾಲ ಸತತವಾಗಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಮಜ್ಜಿಗೆ ಸೇವೆ ಮಾಡಿ ಭಕ್ತಾದಿಗಳ ದಾಹ ತೀರಿಸಿದರು. ನಂತರ ವೀರಾಂಜನೆಯನ ಓಕಳಿ ಕಂಬ ಹತ್ತುವುದರ ಮೂಲಕ ನೀರು ಮತ್ತು ಕೆಸರು ಎರಚಾಡುತ್ತಾ ಕಂಬವನ್ನು ಹತ್ತಲು…. ನಾ…. ಮುಂದು ….ತಾ …..ಮುಂದು ಎಂದು ಓಕಳಿ ಕಂಬ ಏರಿದರು.

Related