ಬೆಂಗಳೂರು, ಫೆ. 15 : ಆರ್ಸಿಬಿ ಹೊಸ ಲೋಗೋ ಬಿಡುಗಡೆ ಮೂಲಕ ಉತ್ತರ ಕೊಟ್ಟಿದೆ. ನ್ಯೂ ಆರ್ಸಿಬಿ, ನ್ಯೂ ಲೋಗೋ, ಹೊಸ ದಶಕ ಅಂತಾ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿರುವ ಆರ್ಸಿಬಿ, ತನ್ನ ಲೋಗೋದಲ್ಲಿ ಸಿಂಹವೂ ಗೋಲ್ಡನ್ ಕಲರ್ನಲ್ಲಿದೆ. ಜೊತೆಗೆ ಸಿಂಹದ ತಲೆಯ ಮೇಲೆ ಕಿರೀಟವನ್ನ ಇರಿಸಲಾಗಿದೆ. ಕೆಳಗೆ ಅರ್ಧಚಂದ್ರಾಕೃತಿಯ ಮಧ್ಯದ ಒಳಗೆ ಸಿಂಹ ಘರ್ಜಿಸುತ್ತಿರುವ ಭಂಗಿಯ ಲೋಗೋ ಬಿಡುಗಡೆ ಮಾಡಿದೆ. ಈ ಮೂಲಕ 13ನೇ ಆವೃತ್ತಿಯಲ್ಲಿ ಹೊಸತನದೊಂದಿಗೆ ಕಪ್ ಗೆದ್ದೇ ಗೆಲ್ಲಿತ್ತೇವೆ ಎಂಬ ಭರವಸೆ ನೀಡಿದೆ.
ಕೆಲ ದಿನಗಳ ಹಿಂದೆ ರಾಯಲ್ ಚಾಲೆಂಜರ್ಸ್ ಎಂದು ನಾಮಕಾರಣ ಮಾಡಿಕೊಂಡಿದ್ದ ಆರ್ಸಿಬಿ.. ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿತ್ತು. ಬೆಂಗಳೂರು ಎಂಬ ಹೆಸರು ತೆಗೆಯದಂತೆ ಆರ್ಸಿಬಿ ಫ್ಯಾನ್ಸ್ ಮನವಿ ಮಾಡಿದ್ರು.