ಕಾರ್ಯಕರ್ತರ ಪ್ರತಿಭಟನೆ ಹಿಂದಕ್ಕೆ

  • In State
  • February 4, 2020
  • 432 Views
ಕಾರ್ಯಕರ್ತರ ಪ್ರತಿಭಟನೆ ಹಿಂದಕ್ಕೆ

ಬೆಂಗಳೂರು, ಫೆ. 3 : ಇಪ್ಪತ್ತೊಂದು ಸಾವಿರ ಗೌರವಧನ ನಿಗದಿ, ಖಾಸಗೀಕರಣ ಕೈ ಬಿಡುವುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಬೆಂಗಳೂರು ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಸಬೇಕಿದ್ದ ಪ್ರತಿಭಟನಾ ಮರೆವಣಿಗೆಗೆ ನಗರ ಪೊಲೀಸರು ದಿಗ್ಬಂಧನ ಹಾಕಿದರು.

ಟ್ರಾಫಿಕ್ ಜಾಮ್ ಉಂಟಾಗಿ ಸಾವಿರಾರು ಜನರಿಗೆ ಅನನುಕೂಲವಾಗುವ ಕಾರಣ ಮುಂಚಿತವಾಗಿಯೇ ಮೆರವಣಿಗೆಗೆ ನಿರ್ಬಂಧ ಹೇರಲಾಗಿತ್ತು. ಆದರೂ, ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ನಗರ ರೈಲು ನಿಲ್ದಾಣದಲ್ಲಿ ಸೇರಿದ್ದರು.

ಆದರೆ, ಅವರನ್ನು ತಡೆಯಲೇಬೇಕೆಂಬ ಉದ್ದೇಶದಿಂದ ನೂರಾರು ಸಂಖ್ಯೆಯಲ್ಲಿ ನಿಲ್ದಾಣದ ಬಳಿ ಸೇರಿದ್ದ ಪೊಲೀಸರು, ನಿಲ್ದಾಣದ ಆವರಣದಲ್ಲೇ ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿದರು. ದಿಗ್ಬಂಧನದ ನಡುವೆ ಸರಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತೆಯರು ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

Related