80 ಸಾವಿರ ಚೇಳು ಸಾಕಿದ ಭೂಪ

80 ಸಾವಿರ ಚೇಳು ಸಾಕಿದ ಭೂಪ

ಪ್ರಪಂಚದಲ್ಲಿ ಎಂತೆದ್ದದ್ದೋ ಬಿಸಿನೆಸ್‌ಗಳು ಇವೆ. ನಾವು ವಿಷಕಾರಿ ಎಂದು ಸಾಯಿಸುವ ಚೇಳನ್ನೇ ಸಾಕುವ ಬಿಸಿನೆಸ್ ಇದೆ.   ಬಿಸಿನೆಸ್‌ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ವ್ಯಕ್ತಿಯೊಬ್ಬ ಇದೀಗ 80 ಸಾವಿರ ಚೇಳನ್ನು ಸಾಕಿ  ಕಂಪನಿಯೊಂದನ್ನು  ನಡೆಸುತ್ತಿದ್ದಾನೆ.

ಈಜಿಪ್ಟ್ ನ   ಮೊಹಮ್ಮದ್ ಹ್ಯಾಮಿ ಬೋಷ್ತಾ ಪುರಾತತ್ವ ಶಾಸ್ತ್ರದಲ್ಲಿ ಪದವಿ ಪಡೆಯುಗ ಚೇಳು ಸಾಕುವ ಯೋಚನೆ ಬಂದಿತಂತೆ . ಪದವಿಯನ್ನು ಅರ್ಧದಲ್ಲೇ ತ್ಯಜಿಸಿ ಈತ ಚೇಳು ಸಾಕಲು ಆರಂಭಿಸಿದ್ದಾನೆ. ಅದಕ್ಕೆಂದೇ ಕೈರೋ ವೆನಮ್ ಹೆಸರಿನ ಸಂಸ್ಥೆ ಸ್ಥಾಪಿಸಿದ್ದಾನೆ.

ಚೇಳು ಸಾಕುವುದಕ್ಕೆ ಒಂದು ಪ್ರಮುಖ ಕಾರಣವಿದೆ. ಚೇಳಿನ ಬಾಲದ ತುದಿಯಿಂದ ಬರುವ ವಿಷವನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆಯಂತೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆಯಿದೆ. ಯುವಿ ಕಿರಣಗಳನ್ನು ಬಳಸಿ ಚೇಳನ್ನು ಸೆರೆ ಹಿಡಿಯಲಾಗುತ್ತದೆ. ನಂತರ ಅವುಗಳಿಗೆ ಸಣ್ಣ ಪ್ರಮಾಣದ ವಿದ್ಯುತ್ ನೀಡಿ, ಅವುಗಳಿಂದ ವಿಷವನ್ನು ಸಂಗ್ರಹಿಸಲಾಗುವುದು. ಪ್ರತಿ ಒಂದು ಗ್ರಾಂ ವಿಷಕ್ಕೆ 10 ಸಾವಿರ ಅಮೆರಿಕನ್ ಡಾಲರ್ ಅಂದರೆ ಸರಿಸುಮಾರು 7.4 ಲಕ್ಷ ರೂಪಾಯಿ ಬೆಲೆ ಇದೆಯಂತೆ.

Related