ಎಪಿಎಮ್‌ಸಿಯಿಂದ 74.42 ಲಕ್ಷ ರೂ. ಸಂಗ್ರಹ

ಎಪಿಎಮ್‌ಸಿಯಿಂದ 74.42 ಲಕ್ಷ ರೂ. ಸಂಗ್ರಹ

ಸವದತ್ತಿ : ಕೋವಿಡ್-19 ಕೊರೋನಾ ಮಹಾಮಾರಿಯ ನಡುವೆ ಸುರಕ್ಷತಾ ಕ್ರಮದೊಂದಿಗೆ 49.61. ಕೋಟಿ ರೂ. ರೈತರ ಮಾಲುಗಳ ವಹಿವಾಟು ನಡೆಸಿ. ಕಳೆದ ಮೂರು ತಿಂಗಳಲ್ಲಿ ಸವದತ್ತಿ ಎಪಿಎಮ್‌ಸಿ ಸುಮಾರು 74.42 ಲಕ್ಷ ರೂ. ಮಾರುಕಟ್ಟೆ ಶುಲ್ಕ ಸಂಗ್ರಹಿಸಿದೆ ಎಂದು ಎಪಿಎಮ್‌ಸಿ ಅಧ್ಯಕ್ಷ ಜಗದೀಶ್ ಹಣಸಿ ಹೇಳಿದರು.

ಎಪಿಎಮ್‌ಸಿ ಸಭಾಂಗಣದಲ್ಲಿ ತ್ರೆöÊಮಾಸಿಕ ಸಭೆ ಹಾಗೂ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಪ್ರಪಂಚವೇ ಆ ಮಹಾಮಾರಿಗೆ ತುತ್ತಾಗಿದ್ದು, ರೈತರು ಬೆಳೆದ ತಮ್ಮ ಬೆಳೆಗಳನ್ನು ಸಾಗಿಸಲು ಮತ್ತು ಮಾರಲು ಹರಸಾಹಸ ನಡೆಸಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಸರಕಾರದ ಆನಂದ ಮಾಮನಿಯವರ ಪ್ರಯತ್ನದಿಂದ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಲಾಕ್‌ಡೌನ್ ಅವಧಿಯಲ್ಲಿ ರೈತರಿಗೆ ಮಾರುಕಟ್ಟೆ ಒದಗಿಸಿ ಅವರು ಬೆಳೆದ ಬೆಳೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಲು ಅನುಕೂಲ ಕಲ್ಪಿಸಿದ್ದರಿಂದ ರೈತರಿಗೆ ಸಾಕಷ್ಟು ಅನುಕೂಲವಾಯಿತು. ಅಲ್ಲದೆ ಕೋವಿಡ್ ರೋಗದ ನಿಯಂತ್ರಣ ನಿಧಿಗೆ 10 ಲಕ್ಷ ರೂ.ದೇಣಿಗೆ ನಿಡಲಾಗಿದೆ ಎಂದರು.

ತಾಲೂಕಿನ ಎಪಿಎಮ್‌ಸಿಯಲ್ಲಿ ಪಾರದರ್ಶಕ ಶಿಸ್ತುಬದ್ದ ಆಡಳಿತಕ್ಕೆ ಸರ್ಕಾರದಿಂದ ಅಣ್ಣಪ್ಪ ನುಗ್ಗಾನಟ್ಟಿ, ಮಲ್ಲಿಕಾರ್ಜುನ ನರಗುಂದ ಶೋಭಾ ಪಟ್ಟಣಶೇಟ್ಟಿ ಅವರನ್ನು ನಾಮ ನಿರ್ದೆಶನ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದಿಸಿ ಸನ್ಮಾನಿಸಿದರು.

 

Related