ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಶಾಸಕರು

ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಶಾಸಕರು

ವಡಗೇರಾ – ಕೃಷ್ಣಾ ನದಿಯಲ್ಲಿ ಹೊರ ಹರಿವಿನ ಪ್ರಮಾಣ ತಗ್ಗಿದೆ. ಸದ್ಯ ಆಲಮಟ್ಟಿ ಜಲಾಶಯದಲ್ಲಿ ಕಡಿಮೆ ನೀರು ಇದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಒಳ ಹರಿವು ಹಾಗೂ ಸಂಗ್ರಹ ಕಡಿಮೆ ಇದೆ. ಹೀಗಾಗಿ ಕೃಷ್ಣಾ ನದಿ ಪಕ್ಕದಲ್ಲಿ ಜನರಿಗೆ ಪ್ರವಾಹ ಭೀತಿ ಇಲ್ಲ..

ಕೆಳದ  ವಾರದಿಂದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಿರುವುದರಿಂದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಹಲವಾರು ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವ ಪ್ರಯುಕ್ತ ತಾಲೂಕಿ ನಕದ್ರಾಪೂರ, ತುಮಕೂರು, ಕೊಂಕಲ್, ಗೊಂದೇನೂರು, ಚೆನ್ನೂರು ,ಅನಕಸೂಗರ , ಮದರಕಲ್ ಕೊಳ್ಳೂರು, ಗೌಡೂರು, ಟೊಣ್ಣೋರ್, ಯಕ್ಷಿಂತಿ, ಮದರಕಲ್, ಗ್ರಾಮಗಳಿಗೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ನದಿ ತೀರದ ಗ್ರಾಮಗಳಿಗೆ ಬೇಟಿ ನೀಡಿ ವೀಕ್ಷಣೆ ನಡೆಸಿದರು.

ಮೂರು ವರ್ಷಗಳಿಂದ ಸಾಲ ಸೋಲ ಮಾಡಿ ಬೆಳೆದ ಬೆಳೆ ಎಲ್ಲಾ ಕೃಷ್ಣಾ ನದಿಯ ಪ್ರವಾಹದಿಂದ ಸಂಪೂರ್ಣವಾಗಿ ನಾಶವಾಗುತ್ತಿದೆ. ಕಳೆದ ಸಲವೂ ಇದೇ ರೀತಿ ಪ್ರವಾಹ ಬಂದಾಗ ನಾಶವಾದ ಬೆಳೆಗೆ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದು ಸರಕಾರದಿಂದ ಸಿಗಬೇಕಾದ ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ, ಹೀಗಾದರೆ ನಾವುಗಳು ಜೀವನ ನಡೆಸುದಾದರೂ ಹೇಗೆ ಎಂದು ರೈತರು ಶಾಸಕರ ಮುಂದೆ ತಮ್ಮ ಆಳಲನ್ನು ತೋಡಿಕೊಂಡರು.

ನಿಜವಾಗಿ ಯಾವ ರೈತರ ಬೆಳೆ ನಾಶವಾಗಿದೆಯೋ ಅವರಿಗೆ ಪರಿಹಾರ ಸಿಕ್ಕಿಲ್ಲ. ಯಾವುದೇ ಬೆಳೆ ನಾಶವಾಗದ ರೈತರಖಾತೆಗೆ ಪರಿಹಾರಧನ ವಿತರಿಸಲಾಗಿದೆ. ಅಧಿಕಾರಿಗಳು ತಮಗೆ ಬೇಕಾದ ರೈತರಿಗೆ ಮಾತ್ರ ಸರಕಾರದ ಪರಿಹಾರವನ್ನು ಒದಗಿಸಿಕೊಟ್ಟಿದ್ದಾರೆ ಎಂದು ಆರೋಪಿಸುತ್ತಲೆ ಕೆಂಡಮಂಡಲವಾದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಸ್ಥಳದಲ್ಲಿಯೇ ಇದ್ದ ತಹಸಿಲ್ದಾರ್ ಹಾಗೂ ಕೃಷಿ ಅಧಿಕಾರಿಗಳನ್ನು ಕರೆದು ನೀವುಗಳು ಯಾವ ರೀತಿ ಸರ್ವೇ ಮಾಡುತ್ತೀರಿ ನಿಜವಾಗಿ ಬೆಳೆ ಕಳೆದುಕೊಂಡ ರೈತರಿಗೆ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ ಎಂದರೆ ಏನರ್ಥ ಇಂತ ಕೆಲಸ ಮಾಡಿ ನನಗೆ ಕಳಂಕ ತರುತ್ತಿದ್ದೀರಿ. ಇದನ್ನು ಸಹಿಸಲು ಸಾಧ್ಯವಿಲ್ಲ ಕೂಡಲೇ ತಪ್ಪನ್ನು ಸರಿಪಡಿಸದಿದ್ದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಶ್ರೀನಿವಾಸರೆಡ್ಡಿಚೆನ್ನೂರು, ಹಾಲು ಒಕ್ಕೂಟದ ಮಾಜಿಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್, ಶಿವರಾಜಪ್ಪಗೌಡ ಮಲ್ಹಾರ, ಚೆನ್ನಾರೆಡ್ಡಿ ಮದರಕಲ್, ಮಹೇಶರೆಡ್ಡಿ ಮುದ್ನಾಳ, ಶರಣಗೌಡ ಬಾಡಿಯಾಳ, ರುದ್ರಗೌಡ, ಈರಣ್ಣ ಸಾಹು ತಡಿಬಿಡಿ, ಶಂಕ್ರಣ್ಣ ಸಾಹು ಕರಣಿಗಿ, ವಿರುಪಾಕ್ಷಪ್ಪಗೌಡ ಮಾಚನುರು, ಶಂಕ್ರಪ್ಪಗೌಡ ಗೋನಾಲ, ಪರಶುರಾಮಕುರಕುಂದಾ, ಸುರೇಶಗೌಡಅನಕಸೂಗುರು,ಡಾ. ಮರಿಯಪ್ಪ ನಾಟೇಕಾರ, ನಾಗಶೆಟ್ಟಿಖಾನಾಪೂರು, ನಿಂಗಯ್ಯಕೊಂಕಲ್, ಅಮೀನರೆಡ್ಡಿ ಹಾಲಗೇರಾ, ಯಂಕಣ್ಣ ಬಸವಂತಪೂರ, ಮರಿಲಿಂಗಪ್ಪಖಾನಾಪೂರ, ಶರಣಗೌಡಐಕೂರು, ಭೀಮಣ್ಣಗೌಡ ಕ್ಯಾತನಾಳ, ಶಾಂತಪ್ಪಗೊಂದೇನೂರು, ಶಿವಕುಮಾರ ಕೊಂಕಲ್ ಸೇರಿದಂತೆ ಕೆಇಬಿ, ಕೃಷಿ,  ಇಲಾಖೆಯ ಅಧಿಕಾರಿಗಳುಇನ್ನೀತರಇದ್ದರು.

Related