ವಕೀಲನ ಮೇಲೆ ಹಲ್ಲೆ 6 ಪೊಲೀಸ್ ಅಧಿಕಾರಿಗಳು ಅಮಾನತು

ವಕೀಲನ ಮೇಲೆ ಹಲ್ಲೆ 6 ಪೊಲೀಸ್ ಅಧಿಕಾರಿಗಳು ಅಮಾನತು

ಚಿಕ್ಕಮಗಳೂರು: ರಾಜ್ಯದಲ್ಲಿ ಕಾನೂನು ಕಾಪಾಡುವ ಕೈಗಳಿಂದಲೇ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇಂಥದ್ದೇ ಘಟನೆ ಒಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಹೌದು, ಚಿಕ್ಕಮಗಳೂರಿನಲ್ಲಿ ಯುವ ವಕೀಲ ಮೇಲೆ ಪೊಲೀಸರು ದರ್ಪ ಮೆರೆದಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಪ್ರೀತಮ್ ಎಂಬ ಯುವ ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸರು ಕಿರಿಕ್ ಮಾಡಿದ್ದರು. ಬೈಕ್‌ ರನ್ನಿಂಗ್‌ನಲ್ಲಿ ಇದ್ದಾಗಲೇ ಕೀ ಕಿತ್ತುಕೊಂಡರು ಎಂದು ಆರೋಪ ಮಾಡಿದ್ದಾರೆ. ಪೊಲೀಸರ ಹಲ್ಲೆ ಬಳಿಕ ಯುವ ವಕೀಲ ಪ್ರೀತಮ್ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಹಾಗೂ ವಕೀಲರ ನಡುವೆ ಕೆಲಕಾಲ ವಾಗ್ವಾದ ನಡೆದಿತ್ತಂತೆ.

ಎಸ್​ಪಿ ವಿಕ್ರಂ ಅಮಟೆ ವಿರುದ್ಧ ಧಿಕ್ಕಾರ ಕೂಗಿ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದರು. ಹಲ್ಲೆಗೈದವರು ಠಾಣೆಯಲ್ಲಿದ್ದರೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಶಶಿಕುಮಾರ್, ಗುರುಪ್ರಸಾದ್ ಸೇರಿದಂತೆ ಪೊಲೀಸರ ಮೇಲೆ ಐಪಿಸಿ ಸೆಕ್ಷನ್ 307 ಪ್ರಕರಣ ದಾಖಲು ಮಾಡಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್​ಪಿ ವಿಕ್ರಮ್ ಅಮಟೆ, ಪ್ರಕರಣದಲ್ಲಿ ವಕೀಲರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದು, ಅವರ ಹೇಳಿಕೆಯನ್ನ ಪಡೆದುಕೊಂಡು ಎಫ್​​ಐಆರ್ ದಾಖಲು ಮಾಡಿದ್ದೇವೆ. ತನಿಖೆಯನ್ನು ಡಿವೈಎಸ್​ಪಿ ಚಿಕ್ಕಮಗಳೂರು ಅವರಿಗೆ ವಹಿಸಿದ್ದೇವೆ.

ಘಟನೆಯಲ್ಲಿ ಆರೋಪ ಇರುವ ಓರ್ವ ಪಿಎಸ್ ಐ, ಓರ್ವ ಎಎಸ್ ಐ, ಓರ್ವ ಹೆಡ್ ಕಾನ್ಸ್‌ಟೇಬಲ್, ಮೂವರು ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ. ಶಶಿಕುಮಾರ್, ಗುರುಪ್ರಸಾದ್ ಎಂಬ ಪೊಲೀಸರ ಮೇಲೆ ಐಪಿಸಿ ಸೆಕ್ಷನ್ 307 ಪ್ರಕರಣ ದಾಖಲು ಮಾಡಲಾಗಿದೆ. ತನಿಖೆ ನಡೆಯಲಿದ್ದು, ವಕೀಲರ ಸಂಘದೊಂದಿಗೂ ಮಾತುಕತೆ ನಡೆಸಿದ್ದೇವೆ. ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

Related