ಕೊರೊನಾ ವಿಪತ್ತು ಪರಿಹಾರ ನೀಡುವಂತೆ ಸರ್ಕಾರಕ್ಕೆ ಜಿಗಣಿ ಶಂಕರ್ ಒತ್ತಾಯ

ಕೊರೊನಾ ವಿಪತ್ತು ಪರಿಹಾರ ನೀಡುವಂತೆ ಸರ್ಕಾರಕ್ಕೆ ಜಿಗಣಿ ಶಂಕರ್ ಒತ್ತಾಯ

ಕೆ.ಆರ್.ಪುರ: ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸುವುದಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರತಿ ತಿಂಗಳು ಹತ್ತು ಸಾವಿರ ರೂ.ಗಳ ಕೊರೊನಾ ವಿಪತ್ತು ಪರಿಹಾರ ನೀಡುವಂತೆ ಸರ್ಕಾರಕ್ಕೆ ಕರ್ನಾಟಕ ರಿಪಬ್ಲಿಕನ್ ಸೇನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಒತ್ತಾಯಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕು ಕಛೇರಿಯ ಮುಂಭಾಗ ವಿವಿಧ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ವಿಪತ್ತು ಪರಿಹಾರವಾಗಿ ನೇಕಾರರು, ಕ್ಷೌರಿಕರು, ಮಡಿವಾಳರು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ಘೋಷಣೆ ಮಾಡಿ ಪರಿಶಿಷ್ಟರಿಗೆ ಯಾವುದೇ ಪ್ರತ್ಯೇಕ ಪರಿಹಾರ ಘೋಷಣೆ ಮಾಡದೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ದೂರಿದರು.

ನೆತ್ತಿಗಾಗಿ ಸೂರು ಅಡಿಯಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಬಡಜನರು ಯಾವುದೆ ನಿವೇಶನವನ್ನು ನೀಡದಿರುವುದರಿಂದ ಕೂಡಲೇ ನೀವೇಶನ ನೀಡಲು ಮರು ಮನವಿಯನ್ನು ತಹಶಿಲ್ದಾರರಿಗೆ ಸಲ್ಲಿಸಲಾಯಿತು ಎಂದರು.

ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವುದು, ಕೊರೊನಾ ವಿಪತ್ತು ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ನೀಡುವುದು ಹಾಗೂ ನಿವೇಶನ ರಹಿತ ಬಡವರಿಗೆ ಕೂಡಲೇ ನಿವೇಶನ ನೀಡುವಂತೆ ಒತ್ತಾಯಿಸಿ ತಹಶಿಲ್ದಾರ್ ತೇಜಸ್ ಕುಮಾರ್ ರವರಿಗೆ ಮರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು ನಿವೇಶನ ರಹಿತ ಪಲಾನುಭವಿಗಳ ಪಟ್ಟಿ ಸಿದ್ದಪಡಿಸಿ ಸರ್ಕಾರದ ಅನುಮತಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

Related