Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅವಕಾಶಗಳು ಸಿಗದೇ ಬಾಡಿಗೆ ಮನೆಯ ಹಣವೇ ಗತಿಯಾಗಿದೆ: ದಿಗಂತ್!
  • Bangalore
  • Cinema
  • State

ಅವಕಾಶಗಳು ಸಿಗದೇ ಬಾಡಿಗೆ ಮನೆಯ ಹಣವೇ ಗತಿಯಾಗಿದೆ: ದಿಗಂತ್!

Praja Vahini April 25, 2026
WhatsApp Image 2026-04-25 at 16.14.45
Spread the love

ಸಿನಿಮಾದವರ ಬದುಕು ನೀರಿನ ಮೇಲಿನ ಗುಳ್ಳೆ ಇದ್ದಂತೆ. ಯಾವಾಗ ಹೊಡೆಯುತ್ತದೆಯೋ ಎಂಬ ಭಯದಲೇ ಬದುಕಬೇಕಾಗುತ್ತದೆ.

ಹೌದು, ಸಿನಿ ತಾರೆಯರ ಬದುಕು ಅಷ್ಟು ಸುಲಭವಲ್ಲ. ಸಿನಿಮಾಗಳಲ್ಲಿ ಅವಕಾಶ ಸಿಕ್ಕಾಗ ದೊಡ್ಡ, ದೊಡ್ಡ ಪಾತ್ರಗಳನ್ನ ನಿಭಾಯಿಸಿದಾಗ ಮಾತ್ರ ಅವರ ಬದುಕು ಚಂದವಾಗಿರುತ್ತದೆ ಇಲ್ಲವಾದರೆ ಅವರ ಬದುಕು ಹೇಳುತ್ತಿರುವುದು.

ಇನ್ನು ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟ ನಟಿಯರು ಸಿನಿಮಾ ರಂಗದಿಂದ ದೂರನೇ ಉಳಿದುಬಿಟ್ಟಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟ ದಿಗಂತ್ ಅವರು ಹೇಳಿರುವ ಆ ಮಾತುಗಳೇ ಸಾಕ್ಷಿ ಎಂಬಂತಿದೆ.

ನಟ ದಿಗಂತ್  ಅವರು ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.  ಸಿನಿಮಾ ಜಗತ್ತಿನಲ್ಲಿ ನನಗೂ ಕೂಡ ಅವಕಾಶಗಳು ಇತ್ತೀಚಿಗೆ ಕಡಿಮೆಯಾಗಿವೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವಾರು ನಿರ್ಮಾಪಕರು ಸಿನಿಮಾ ಮಾಡಲು ಭಯ ಪಡುತ್ತಿದ್ದಾರೆ. ಸಿನಿಮಾಗಳು ಗೆಲ್ಲದಂತೆ ಆಗಿವೆ. ಒಟಿಟಿಗಳಂತೂ ಕನ್ನಡ ಸಿನಿಮಾಗಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಸ್ವತಃ ನನಗೆ ಅವಕಾಶಗಳ ಕೊರತೆ ಎದುರಾಗಿದ್ದು, ನಟನೆ ಬಿಟ್ಟು ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳೋಣ ಎನಿಸಿದೆ’ ಎಂದಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ನಿಂದ ಕೆಡಿ ಸಿನಿಮಾದ ಟ್ರೈಲರ್ ಡಿಲೀಟ್!

ನಮ್ಮ ಯಾವ ಮಟ್ಟಿಗೆ ಪರಿಸ್ಥಿತಿ ಆಗಿದೆಯೆಂದರೆ. ನಂದಿ ಬೆಟ್ಟದ ಸಮೀಪ ಗೇಟೆಡ್ ಕಮ್ಯೂನಿಟಿಯಲ್ಲಿ ನನ್ನ ಒಂದು ಮನೆ ಇತ್ತು. ಅದನ್ನು ಬಾಡಿಗೆ ಕೊಟ್ಟೆ, ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವಂತಾಗಿತ್ತು. ತೀರ್ಥಹಳ್ಳಿಗೆ ವಾಪಸ್ಸಾಗಿ, ಅಲ್ಲಿ ಕೃಷಿ ಮಾಡೋಣ, ನಟನೆ ಸಾಕು ಎಂದು ನಿರ್ಧರಿಸಿದ್ದೆ ಎಂದು ದಿಗಂತ್ ಹೇಳಿದ್ದಾರೆ. ಚಿತ್ರರಂಗದಲ್ಲಿ ಯಾಕೆ ಯಶಸ್ಸಿನ ಸಂಖ್ಯೆ ಕಡಿಮೆ ಆಯ್ತೋ ತಿಳಿಯುತ್ತಿಲ್ಲ ಎಂದಿದ್ದಾರೆ.

ಇನ್ನು ದಿಗಂತ್ ಪ್ರಸ್ತುತ ‘ರುದ್ರ ಕಾಲ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನಲ್ಲಿ ಸಮಂತಾ ಋತ್ ಪ್ರಭು ಜೊತೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ದೆಹಲಿಯಲ್ಲಿ ಡಿಕೆ ಬ್ರದರ್ಸ್ ಹೈಕಮಾಂಡ್ ಜೊತೆ ಮಹತ್ವದ ಮಾತುಕತೆ?
Next: ಸಚಿವ ಡಿ ಸುಧಾಕರ್ ಅವರ ಆರೋಗ್ಯದ ಬಗ್ಗೆ ಸಿಎಂ ಹೇಳಿದ್ದೇನು?

Views:

39

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.