ಬೆಂಗಳೂರು: ಬಹುನಿರೀಕ್ಷಿತ ಮತ್ತು ಬಹುತಾರಾಗಣದಲ್ಲಿ ಬಿಡುಗಡೆಗೆ ಸಜ್ಜಾಗಿರುವ ʼಕೆಡಿʼ ಸಿನಿಮಾಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಕಳೆದ ಹಲವು ದಿನಗಳ ಹಿಂದೆ ಕೆಡಿ ಸಿನಿಮಾದ ಸರ್ಸೆ ನಿನ್ನ ಸೆರಗಾ ಸರ್ಸೆ ಹಾಡು ವಿವಾದಕ್ಕೆ ಗುರಿಯಾಗಿದ್ದ ಕೆಡಿ ಸಿನಿಮಾಗೆ ಮತ್ತೊಂದು ಸಂಕಷ್ಟ ಆಯ್ಕೆ ಎದುರಾಗಿದೆ.
ಹೌದು, ಬಿಡುಗಡೆಗೆ ಸಜ್ಜಾಗಿರುವ ಕೆ ಡಿ ಸಿನಿಮಾ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತಿದ್ದು, ಇದೀಗ ಇತ್ತೀಚಿಗೆ ಬಿಡುಗಡೆಯಾಗಿದ್ದಕೆಡಿ ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಡಿಲೀಟ್ ಮಾಡಲಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸುಖವಿರಲಿ ದುಃಖವಿರಲಿ ಎಂತಹ ಸಂಕಷ್ಟದಲ್ಲೂ ಸಹನೆ ಮತ್ತು ತಾಳ್ಮೆ ಮುಖ್ಯ: ತೇಜಸ್ವೀ ಸೂರ್ಯ
ಇನ್ನು ಈ ಕುರಿತು ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ ಸ್ಪಷ್ಟನೆ ನೀಡಿದ್ದು, ಟ್ರೇಲರ್ನಲ್ಲಿ ಪ್ರಮಾಣೀಕರಣ ಪ್ರಕ್ರಿಯೆಯ ವೇಳೆ ಅಪ್ರಮಾಣಿತ ಅಂಶಗಳು ಸೇರಿಕೊಂಡಿದ್ದರಿಂದ ಅದನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ. ಸೆನ್ಸಾರ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕೃತ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದೆ.
