ಬೆಂಗಳೂರು: ಬೆಂಗಳೂರು ನಗರದಲ್ಲಿ ಸಾರ್ವಜನಿಕರು ಹೆಚ್ಚಾಗಿ ಬಳಸುವ ಸಾರಿಗೆ ಅಂದರೆ ಅದು ಬಿಎಂಟಿಸಿ ಮಾತ್ರ.
ಹೌದು, ಬಿಎಂಟಿಸಿ ಬಸ್ ಸಾರ್ವಜನಿಕರ ದಿನನಿತ್ಯದ ಬದುಕಿನಲ್ಲಿ ಮಹತ್ವದ ಸಾರಥಿಯಾಗಿದೆ. ಈ ಸಾರಥಿಯಲ್ಲಿ ಕಂಡಕ್ಟರ್ಗಳು ಟಿಕೆಟ್ ನೀಡುವಾಗ ಕ್ಯೂಆರ್ ಕೋಡ್ ಮೂಲಕ ತಮ್ಮ ವೈಯಕ್ತಿಕ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಇದನ್ನು ಅರಿತ ಬಿಎಂಟಿಸಿ ನಿಗಮವು ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಕಂಡಕ್ಟರ್ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಹೊಸ ರೂಲ್ಸ್ ಅನ್ನು ಮಾಡಲಾಗಿದೆ.
ಯೆಸ್…ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಹೊಸ ಇಟಿಎಂ ಮಿಷನ್‌ಗಳನ್ನು ಇಲಾಖೆ ಪರಿಚಯಿಸುತ್ತಿದೆ. ಮುಂದಿನ ತಿಂಗಳಾಂತ್ಯಕ್ಕೆ ಎಲ್ಲಾ ಬಸ್‌ಗಳಲ್ಲಿಯೂ ಈ ಹೊಸ ಇಟಿಎಂಗಳು ಲಭ್ಯವಾಗಲಿವೆ.
ಇನ್ನು ಸುಮಾರು 11 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ.
ಯಶವಂತಪುರ ಡಿಪೋ ಸೇರಿದಂತೆ ಹತ್ತು ರೂಟ್‌ಗಳಲ್ಲಿ ಟ್ರಯಲ್ ನಡೆಸುತ್ತಿದೆ. ಟ್ರಯಲ್ ಕಾರ್ಯ ಮುಕ್ತಾಯದ ಹಂತ ತಲುಪಿದ್ದು, ಮೇ 30ರಿಂದ ಬಿಎಂಟಿಸಿಯ 6 ಸಾವಿರಕ್ಕೂ ಹೆಚ್ಚು ಬಸ್‌ಗಳಲ್ಲಿ ಇಟಿಎಂಗಳು ಲಭ್ಯವಾಗಲಿದೆ. ಇದನ್ನೂ ಓದಿ: GBA ಚುನಾವಣೆ ನಡೆಸಲು ದುಡ್ಡಿಲ್ಲ: GBA
ಇಟಿಎಂಗಳು ಬಂದ ನಂತರ ಬಸ್‌ಗಳಲ್ಲಿ ಅಂಟಿಸಿರೋ ಎಲ್ಲಾ ಕ್ಯೂಆರ್ ಕೋಡ್ ತೆಗೆದು ಹಾಕಲಾಗುತ್ತಿದ್ದು, ಈ ಆಂಡ್ರಾಯ್ಡ್ ಸೌಲಭ್ಯದ ಇಟಿಎಂನಲ್ಲಿ ಅಳವಡಿಸಿರುವ ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನರ್ ಮಾಡಿದರೆ ಮಾತ್ರ ಟಿಕೆಟ್ ಜನರೇಟ್ ಆಗಲಿದೆಯಂತೆ. ಇದರಿಂದ ಪ್ರಯಾಣಿಕರು ಹಾಗೂ ಕಂಡೆಕ್ಟರ್‌ಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎನ್‌ಸಿಎಂಸಿ ಬಳಸಿ ಹಣ ಪಾವತಿಸುವ ಅವಕಾಶವನ್ನು ನೀಡಲಾಗುತ್ತಿದೆ. ಇದರಿಂದ ಟಿಕೆಟ್ ವೇಗವಾಗಿ ನೀಡಬಹುದಾಗಿದೆ.
