ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಫುಲ್ ಖುಷಿಯಾಗಿದ್ದಾರೆ.
ಹೌದು, ಟಾಕ್ಸಿಕ್ ಸಿನಿಮಾದ ಟೀಸರ್ ಈ ಮೊದಲು ರಿಲೀಸ್ ಆಗಿತ್ತು. ಆದರೆ ಅದು ಹಲವು ಟೀಕೆಗಳಿಗೆ ಕಾರಣವಾಗಿತ್ತು. ಆದರೆ ಈ ಬಾರಿ ವಿಭಿನ್ನವಾಗಿ ಟೀಸರ್ ದೃಶ್ಯಗಳನ್ನು ರಿಲೀಸ್ ಮಾಡಿದ್ದು ಅಭಿಮಾನಿಗಳನ್ನು ಟೀಸರ್ ನೋಡಿ ಭೇಷ್ ಎಂದಿದ್ದಾರೆ.
ಯೆಸ್.. ಈ ಬಾರಿ ಟೀಸರ್ ನಲ್ಲಿ ಯಶ್ ಕೈಯಲ್ಲಿ ಬಿಡಿ ಹಿಡಿದು ಫೈಟಿಂಗ್ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ರಿಲೀಸ್ ಆದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡಿದೆ
ಟಾಕ್ಸಿಕ್’ ಟೀಸರ್ನಲ್ಲಿ ಬರೋ ಡೈಲಾಗ್ಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ‘ಹಠ ಬಿಟ್ಟುಬಿಡು’ ಎಂದು ಹೇಳಿದಾಗ ಅದು ಸಾಧ್ಯವೇ ಇಲ್ಲ ಎಂದು ಯಶ್ ಹೇಳುತ್ತಾರೆ. ಯಶ್ ಅವರು ಹುಟ್ಟುಗುಣ ಇದು. ಈ ಗುಣಕ್ಕೆ ಹೋಲಿಕೆ ಆಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಈ ಕಾರಣದಿಂದಲೂ ಟೀಸರ್ ಇಷ್ಟ ಆಗಿದೆ. ಇದನ್ನೂ ಓದಿ: ಥಿಯೇಟರ್ ಗೆ ಬಂದು ಸಿನಿಮಾ ನೋಡಿ ನಿಮ್ದೇನು ಗಂಟ್ ಹೋಗಲ್ಲ: ರವಿಚಂದ್ರನ್
