ಬಾಗಲಕೋಟೆ: ಬಾಗಲಕೋಟೆಯಲ್ಲಿ ನಿನ್ನೆ (ಗುರುವಾರ ಫೆಬ್ರುವರಿ 19) ರಂದು ಛತ್ರಪತಿ ಶಿವಾಜಿ ಜಯಂತಿಯ ಪ್ರಯುಕ್ತ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿಡಿಯೋಗಳನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ನಾವೇ ದೂರನ್ನು ದಾಖಲಿಸಿಕೊಂಡಿದ್ದೇವೆ ಎಂದು ಬಾಗಲಕೋಟೆಯ ಎಸ್‌ಪಿ ಸಿದ್ದಾರ್ಥ ಗೋಯಲ್ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾತ್ರಿ 10:06ಕ್ಕೆ ಕಲ್ಲು ಎಸೆಯಲಾಗಿದೆ. ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ 7 ಮಂದಿ ಮೇಲೆ ಕೇಸ್ ದಾಖಲಿಸಿದ್ದೇವೆ ಎಂದರು. ಡಿಜೆ ವಿಚಾರಕ್ಕೆ ಗಲಾಟೆ ನಡೆದಿಲ್ಲ. ಕಲ್ಲು ಮತ್ತು ಚಪ್ಪಲಿ ಎಸೆಯಲಾಗಿದೆ. ರಾತ್ರಿ 9:30ಕ್ಕೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಕೆಲವರು ಅಲ್ಲೇ ಉಳಿದುಕೊಂಡಿದ್ದರು. ಉಳಿದುಕೊಂಡ ವ್ಯಕ್ತಿಗಳ ಪೈಕಿ ತನ್ವೀರ್ ಕಲ್ಲು ಎಸೆದಿದ್ದಾನೆ ಎಂದು ಸಿದಾರ್ಥ್ ಗೋಯಲ್ ತಿಳಿಸಿದರು. ಇದನ್ನೂ ಓದಿ: ಮಾನ್ಯ ಮುಖ್ಯಮಂತ್ರಿಗಳೇ, ಹಿಂದೂ ಸಮಾಜದ ತಾಳ್ಮೆ ಪರೀಕ್ಷಿಸಬೇಡಿ: ಬಿವೈವಿ
ಎಸ್‌ಪಿ, ತನ್ವೀರ್ ಉದ್ದೇಶಪೂರ್ವಕವಾಗಿಯೇ ಕಲ್ಲು ಎಸೆದಿದ್ದು ನಮ್ಮ ಇಬ್ಬರು ಕಾನ್‌ಸ್ಟೇಬಲ್ ಮತ್ತು ನನ್ನ ಮೇಲೆ ಬಿದ್ದಿತ್ತು. ನಾವೆಲ್ಲರೂ ಹೆಲ್ಮೆಟ್ ಹಾಕಿದ್ದರಿಂದ ಯಾವುದೇ ಗಂಭೀರ ಗಾಯವಾಗಿಲ್ಲ. ಮಸೀದಿಯಿಂದ ಕಲ್ಲು ಎಸೆದಿದ್ದು ನಮ್ಮ ವಿಡಿಯೋದಲ್ಲೂ ಸೆರೆಯಾಗಿದೆ ಎಂದು ತಿಳಿಸಿದರು.
