ಪ್ರಮಾಣಿಕವಾಗಿ ಕೆಲಸ ಮಾಡಿದ್ದೆ ತಪ್ಪಾಯ್ತಾ? ಎಸಿಪಿ ವಾಸು ಪ್ರಶ್ನೆ

ಪ್ರಮಾಣಿಕವಾಗಿ ಕೆಲಸ ಮಾಡಿದ್ದೆ ತಪ್ಪಾಯ್ತಾ? ಎಸಿಪಿ ವಾಸು ಪ್ರಶ್ನೆ

ಆನೇಕಲ್ : ರಾಜ್ಯದಲ್ಲಿ ಒಂದೆಡೆ ಕೊರೊನಾ,ಲಾಕ್ಡೌನ್ ನಡುವೆ ಜನರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ರೆ, ಇನ್ನೊಂದು ಕಡೆ ಕೆಲವು ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಆಡಬಾರದ ಆಟ ಆಡುತ್ತಿರುವುದು ಬೆಳಕಿಗೆ ಬಂದಿದೆ.

ಕಳೆದ 11 ರಂದು ಬೆಟ್ಟದಾಸನಪುರದ ಬಳಿ ಸರ್ಕಾರದ ಜಾಗೃತಿ ದಳದ ವಾಹನದಲ್ಲಿ ಬರೋಬ್ಬರಿ ಎಂಟು ಬಾಕ್ಸ್ನಲ್ಲಿ ೧೦೦ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಬಳಿಕ ಇದರ ಖಚಿತ ಮಾಹಿತಿ ಪಡೆದ ಎಸಿಪಿ ವಾಸು ನೇತೃತ್ವದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದಾಳಿ ನಡೆಸಿ ವಾಹನ ಹಾಗು ಮದ್ಯ ಸೀಜ್ ಮಾಡಿದ್ದರು.
ಇದಾದ ಬಳಿಕ ಸರಕಾರಿ ವಾಹನದಲ್ಲಿ ಮದ್ಯ ಸಾಗಾಟ ಮಾಡಿದ್ದ ಖದೀಮನ ವಿರುದ್ದ ಎಸಿಪಿ ವಾಸು ಎಫ್ಐಆರ್ ದಾಖಲು ಮಾಡಿದ್ದರು.

ಆದರೀಗ ಈ ಮದ್ಯ ಸಾಗಾಟದ ಹಿಂದೆ ಅಡಿಷನಲ್ ಕಮಿಷನರ್ ಮುರುಗನ್ ಹೆಸರು ಕೇಳಿ ಬಂದಿದೆ.ಅಲ್ಲದೆ, ಈ ಪ್ರಕರಣದಲ್ಲಿ ಲಂಚ ಕೇಳಿದರೆಂದು ಕುಂಟು ನೆಪ ಹೇಳಿ ಎಸಿಪಿ ವಾಸು ಅವರ ಸಸ್ಪೆಂಡ್ ಮಾಡಲಾಗಿದೆ.

ಒಟ್ಟಿನಲ್ಲಿ, ಪ್ರಮಾಣಿಕವಾಗಿ ಕೆಲಸ ಮಾಡಿದ್ದೆ ತಪ್ಪಾಯ್ತಾ? ಹಿರಿಯ ಅಧಿಕಾರಿಗಳ ಮಾತು ಕೇಳದೆ ಹೋದರೆ ಅಮಾನತ್ತೇ ಬಹುಮಾನವ? ಎಲ್ಲರ ರಕ್ಷಣೆ ಮಾಡುವ ಪೋಲೀಸರ ಪಾಡೆ ಹೀಗಾದರೆ ಸಾಮಾನ್ಯರ ಪಾಡೇನು? ಮದ್ಯ ಸೀಜ್ ಮಾಡಿದ್ದೆ ಕೆಲಸಕ್ಕೆ ಕುತ್ತಾಯ್ತಾ? ಎಂಬ ಪ್ರಶ್ನೆ ಎತ್ತಿದ್ದಾರೆ.

Related