ಬೆಂಗಳೂರು: ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ಮಂತ್ರಿಗಳ ಪಾತ್ರವಿರುವುದಿಲ್ಲ. ಟೆಂಡರ್ ಆಹ್ವಾನದಿಂದ ಹಿಡಿದು ಅಂತಿಮವರಿಗೆ ಎಲ್ಲಾ ಹಂತದ ನಿಯಮಗಳನುಸಾರವಾಗಿ ನಡೆಯುತ್ತದೆ ಇದರಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಚಿವ ಭೈರತಿ ಸುರೇಶ್ ಅವರು ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ದಾಖಲೆ ಅಥವಾ ಸಾಕ್ಷ್ಯವಿಲ್ಲದೆ ಆರೋಪ ಮಾಡುವುದು ಜವಾಬ್ದಾರಿಯುತ ನಡೆ ಅಲ್ಲ ಎಂದು ಹೇಳಿದರು. ಪಾರದರ್ಶಕ ನಿಯಮಗಳ ಅಡಿಯಲ್ಲಿ ಅಧಿಕಾರಿಗಳೇ ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ನಡೆಸುತ್ತಾರೆ ಎಂದರು.ಇದನ್ನೂ ಓದಿ: ಇಬ್ರಾಹಿಂಪುರ ಹೋಗುವ ರಸ್ತೆಯಲ್ಲಿ ಗುಂಡಿಗಳ ಕಾರುಬಾರು
ಟೆಂಡರ್ ಆಹ್ವಾನದಿಂದ ಹಿಡಿದು ಅಂತಿಮ ಗುತ್ತಿಗೆ ನೀಡುವವರೆಗೆ ಎಲ್ಲಾ ಹಂತಗಳು ನಿಯಮಾನುಸಾರ ನಡೆಯುತ್ತಿದ್ದು, ಇದರಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ ಎಂದು ಬೈರತಿ ಸುರೇಶ್ ಹೇಳಿದರು. ಈ ವ್ಯವಸ್ಥೆ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಿಗೆ ಚೆನ್ನಾಗಿ ತಿಳಿದಿದ್ದರೂ ಕೂಡ ಪದೇಪದೇ ಮಂತ್ರಿಗಳ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
