Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಇಬ್ರಾಹಿಂಪುರ ಹೋಗುವ ರಸ್ತೆಯಲ್ಲಿ ಗುಂಡಿಗಳ ಕಾರುಬಾರು
  • State
  • ಶಹಾಪುರ

ಇಬ್ರಾಹಿಂಪುರ ಹೋಗುವ ರಸ್ತೆಯಲ್ಲಿ ಗುಂಡಿಗಳ ಕಾರುಬಾರು

Praja Vahini January 29, 2026
Screenshot_2026-01-29-18-47-26-16_6012fa4d4ddec268fc5c7112cbb265e7
Spread the love

ಜನಪ್ರತಿನಿಧಿಗಳು ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿ

ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದೊಳಗಿಂದ ಇಬ್ರಾಹಿಂಪುರ ಗ್ರಾಮಕ್ಕೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಗುರುವಾರ, ಸೋಮವಾರ ಎತ್ತೆಚ್ಚವಾಗಿ ಇದೇ ರಸ್ತೆಯ ಮೂಲಕ ಇಬ್ರಾಹಿಂಪುರ ಅಬ್ದುಲ್ ಭಾಷಾ ಕೆರೆಗೆ ತೆರಳುವ ಭಕ್ತರಿಗೆ ಗುಂಡಿ ರಸ್ತೆಯಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ನಗರ ಮಂಡಲ ತಾಲೂಕ ಅಧ್ಯಕ್ಷ ಬಸ್ಸು ರತ್ತಾಳ ಆರೋಪಿಸಿದ್ದಾರೆ.
ಕೆರೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟು ಮೊಣಕಾಲು ಮಟ್ಟ ತಗ್ಗು ದಿನ್ನೆಗಳು ಬಿದ್ದಿವೆ. ತಗ್ಗಿನ ಆಳ ಅರಿಯದೇ ಕೆಲವರು ಆಯತಪ್ಪಿ ಕೂಡ ನೆಲಕ್ಕೆ ಬಿದ್ದಿದ್ದಾರೆ. ನಾಲ್ಕು ಚಕ್ರದ ವಾಹನಗಳು ರಸ್ತೆಗೆ ಬಂದರೆ ನಡುವೆ ಕೈ ಕೊಡುವುದು ಗ್ಯಾರಂಟಿ. ಬೈಕ್ ಸವಾರರ ಸ್ಥಿತಿ ದಯನೀಯವಾಗಿದೆ. ಕೆರೆಗೆ ತೆರಳುವ ಭಕ್ತರು ದೇವರ ಹೆಸರಲ್ಲಿ ಚಪಿಸುತ್ತ ತೆರಳುವ ಪರಿಸ್ಥೀತಿ ಬಂದೊದಗಿದೆ. ವಾಹನ ಸವಾರರಿಗೆ ಪ್ರಾಣಾಂತಿಕವಾಗಿ ಪರಿಣಮಿಸಿದೆ. ಇದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ.
ಸಾಕಷ್ಟು ಪ್ರಮಾಣದಲ್ಲಿ ತಗ್ಗುಗಳು ಬಿದ್ದಿರುವ ಹಿನ್ನಲೆ ವಾಹನ ಚಲಾಯಿಸುವಾಗ ಆಯತಪ್ಪಿ ಬಿಳುತ್ತಿರುವದು ಸಾಮಾನ್ಯವಾಗಿ ಬಿಟ್ಟಿದೆ. ವರ್ಷಗಳೇ ಉರುಳಿದರೂ ಡಾಂಬರೀಕರಣ ಇಲ್ಲದೆ ರಸ್ತೆಗಳಲ್ಲಿ ಹೆಜ್ಜೆಹೆಜ್ಜೆಗೆ ಅಸಂಖ್ಯಾತ ಗುಂಡಿಗಳ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶದ ರಸ್ತೆ ಸುಧಾರಣೆಗೆ ರಾಜ್ಯ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ಸಂಬಂಧಪಟ್ಟ  ಇಲಾಖೆ ಅಧಿಕಾರಿಗಳು ಮಾತ್ರ ಈ ರಸ್ತೆ ದುರಸ್ಥೀಗೆ ಮುಂದಾಗುತ್ತಿಲ್ಲಾ. ಹದಗೆಟ್ಟ ರಸ್ತೆಗಳಿಂದಾಗಿ ಪ್ರಯಾಣದ ಅವಧಿ ಹೆಚ್ಚಿಸುತ್ತಿದ್ದು ಪ್ರಯಾಸವನ್ನುಂಟು ಮಾಡುತ್ತಿವೆ.
ಗುಣಮಟ್ಟದ ರಸ್ತೆ ನಿರ್ಮಿಸಿ ಹಾಳಾಗದಂತೆ ನಿರ್ವಹಣೆ ಮಾಡುವ ಕೆಲಸ ನಡೆಯುತ್ತಿಲ್ಲ. ಹದಗೆಟ್ಟಿರುವ ರಸ್ತೆಗಳ ದುರಸ್ಥಿಗೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷö್ಯದಿಂದಾಗಿ ಗುಂಡಿ ಸಮಸ್ಯೆಯು ಜನತೆಯನ್ನು ಬೆಂಬಿಡದೆ ಕಾಡುತ್ತಿದ್ದು, ಹಿಡಿ ಶಾಪ ಹಾಕುತ್ತಿದ್ದಾರೆ.
ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ
ಗ್ರಾಮೀಣ ರಸ್ತೆಗಳ ದುರಸ್ತಿ ಕಾರ್ಯವನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನಿರ್ವಹಿಸಿದರೆ ಇತರ ಇಲಾಖೆಗಳ ಹೊರೆ ಕಡಿಮೆಯಾಗುತ್ತದೆ. ಜತೆಗೆ ತ್ವರಿತ ರಸ್ತೆ ದುರಸ್ಥೀಗೂ ಸಹಕಾರಿಯಾಗುತ್ತದೆ. ಆದರೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ, ಇದುವರೆಗೂ ಯಾವ ಅಧಿಕಾರಿಗಳು ರಸ್ತೆ ದುರಸ್ಥೀ ಕಾರ್ಯಕ್ಕೆ ಮುಂದಾಗಿಲ್ಲ. ಇದು ಇಲ್ಲಿನ ದುರಾಡಳಿತಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ನಗರ ಮಂಡಲ ತಾಲೂಕ ಅಧ್ಯಕ್ಷಬಸ್ಸು ರತ್ತಾಳ ಹೇಳಿದರು.

About the Author

Praja Vahini

Editor

View All Posts

Spread the love

Post navigation

Previous: ಕೌಶಲ್ಯಾಭಿವೃದ್ಧಿಯಿಂದ ವಿಕಲಚೇತನರಿಗೆ ಸುವರ್ಣ ಅವಕಾಶ
Next: ದಾಖಲೆ ಅಥವಾ ಸಾಕ್ಷ್ಯವಿಲ್ಲದೆ ಆರೋಪ ಮಾಡುವುದು ಸರಿಯಲ್ಲ: ಬೈರತಿ ಸುರೇಶ್

Views:

349

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.