ಬೆಂಗಳೂರು: ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ಡಿಸೆಂಬರ್ 11ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಮೊದಲನೆಯ ದಿನದಿಂದಲೇ ಭರ್ಜರಿ ಪ್ರದರ್ಶನ ಕಾಣುವುದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ವಿ ಕಾಣುತ್ತಿದೆ.
ಪ್ರಕಾಶ್ ವೀರ್ ನಿರ್ದೇಶನದ ‘ದಿ ಡೆವಿಲ್’ ಚಿತ್ರಕ್ಕೆ ಬೆಳಗ್ಗೆ 6 ಗಂಟೆಯಿಂದಲೇ ಫಸ್ಟ್ ಡೇ ಫಸ್ಟ್ ಶೋ ಆರಂಭವಾಗಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಬಹುನಿರೀಕ್ಷಿತ ಈ ಸಿನಿಮಾ ಮೊದಲ ದಿನವೇ ಬರೋಬ್ಬರಿ 13.8 ಕೋಟಿ ರೂಪಾಯಿ ಗಳಿಸುವ ಮೂಲಕ ರೆಕಾರ್ಡ್ ಬರೆದಿದೆ. ಇದನ್ನೂ ಓದಿ: ಡೆವಿಲ್ ಫಸ್ಟ್ ಡೇ ಫಸ್ಟ್ ಶೋಗೆ ಅಭಿಮಾನಿಗಳಿಂದ ಫುಲ್ ರೆಸ್ಪಾನ್ಸ್!
ದರ್ಶನ್ ಈ ಚಿತ್ರದಲ್ಲಿ ಡಬಲ್ ರೋಲ್ನಲ್ಲಿ ಅಭಿನಯಿಸಿದ್ದು, ಧನುಷ್ ರಾಜಶೇಖರ್ ಅಲಿಯಾಸ್ ಡೆವಿಲ್ ಪಾತ್ರದಲ್ಲಿ ನೆಗೆಟಿವ್ ಶೇಡ್ ಹಾಗೂ ಕೃಷ್ಣ ಪಾತ್ರದಲ್ಲಿ ಸಂಪೂರ್ಣ ಹೀರೋ ಅವತಾರದಲ್ಲಿ ಮಿಂಚಿದ್ದಾರೆ. ಅವರ 2 ವಿಭಿನ್ನ ಲುಕ್, ಮ್ಯಾನರಿಸಂ, ಆ್ಯಕ್ಷನ್ ಹಾಗೂ ಅಭಿನಯ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದೆ.
