ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರು ನಟನೆ ಮಾಡಿರುವ ಡೆವಿಲ್ ಸಿನಿಮಾ ಇಂದು (ಗುರುವಾರ ಡಿ.11) ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು ದರ್ಶನ್ ಅಭಿಮಾನಿಗಳು ಸಿನಿಮಾ ನೋಡಿ ಕೃಷಿಪಟ್ಟಿದ್ದಾರೆ.
ಹೌದು, ನಟ ದರ್ಶನ್ ಅಭಿನಯದ ದಿ ಡೆವಿಲ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಪ್ರಕಾರ, ‘ದಿ ಡೆವಿಲ್’ ನ ರೇಟಿಂಗ್ ಮತ್ತು ವಿಮರ್ಶೆಗಳನ್ನು BookMyShow ನಂತಹ ಕೆಲವು ವೇದಿಕೆಗಳಲ್ಲಿ ನಿಷ್ಕ್ರಿಯಗೊಳಿಸಲಾಗಿದೆ.
ನ್ಯಾಯಾಲಯದ ಆದೇಶಕ್ಕೆ ಕಾರಣ ಏನೆಂಬುದು ಸದ್ಯಕ್ಕೆ ಲಭ್ಯವಾಗದಿದ್ದರೂ, ಡೆವಿಲ್ ಚಿತ್ರಕ್ಕೆ ರೇಟಿಂಗ್ಸ್ ಅಥವಾ ವಿಮರ್ಶೆ ನೀಡಲು ಅವಕಾಶವಿಲ್ಲ. ಇದನ್ನೂ ಓದಿ: ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಗ್ರೀನ್ ಸಿಗ್ನಲ್ ನೀಡದ ಮುನಿಯಪ್ಪ
ಸಾಮಾನ್ಯವಾಗಿ ಯಾವುದೇ ಚಿತ್ರವನ್ನು ನೋಡಿದ ಬಳಿಕ ಬುಕ್ ಮೈ ಶೋ ಮೂಲಕ ರೇಟಿಂಗ್ ಮತ್ತು ವಿಮರ್ಶೆ ಬರೆಯಬಹುದು. ಕೆಲವರು ಸನಿಮಾ ಚೆನ್ನಾಗಿದ್ದರೂ ಕೂಡ ವೈಯಕ್ತಿಕ ಧ್ವೇಷದಿಂದಾಗಿ ನೆಗೆಟಿವ್ ವಿಮರ್ಶೆ ಕೊಡುವ ಸಾಧ್ಯತೆ ಇರುತ್ತದೆ.
ಸಿನಿಮಾ ವೀಕ್ಷಿಸಿದ ಬಳಿಕ ಅನೇಕರು ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡಲು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ‘ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆ್ಯಪ್ನಲ್ಲಿ ತೋರಿಸಲಾಗಿದೆ.
